ಕೊಹಿಮ: ನಾಗಾಲ್ಯಾಂಡ್‌ನ ಡಿಮಪುರದಲ್ಲಿ ಬಾಂಬ್ ಸ್ಫೋಟಗೊಂಡು ಓರ್ವ ವ್ಯಕ್ತಿಗೆ ಗಂಭೀರ ಗೊಂಡಿರುವ ಘಟನೆ ನಡೆದಿದೆ.
ಸೋಮವಾರ ರಾತ್ರಿ 8.50ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿದ್ದು, ಮಣಿಪುರದ ಲಾಂಗ್ಜಮ್ ಒಜಿತ್ ಮೀಟೈ (30) ಎಂಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲಿಸರು ತನಿಖೆ ಕೈ ಗೊಂಡಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಸ್ಪೋಟಗೊಂಡ ಸ್ಥಳದಲ್ಲಿದ್ದ ಮಾರುತಿ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ಐಇಡಿ (ಇಂಪ್ರುವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್) ಬಾಂಬ್‌ಗಳು ದೊರಕಿವೆ.
ಇದೇ ಜನವರಿ 26 ರಂದು ಗಣರಾಜ್ಯೋತ್ಸವ ದಿನಾಚರಣೆ ನಡೆಯಲಿದ್ದು ಈ ವೇಳೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಕೆಲ ಉಗ್ರ ಸಂಘಟನೆಗಳು ಸಂಚು ರೂಪಿಸಿದ್ದಾರೆ. ಈ ರೀತಿಯ ಬಾಂಬ್‌ಗಳನ್ನು ಕೆಲ ಆಗಂತುಕರು ತಯಾರು ಮಾಡುತ್ತಾರೆ. ಆದರೆ ಈ ರೀತಿಯ ಕೃತ್ಯಗಳಿಂದ ಯಾರೂ ಭಯಪಡಬೇಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.