ಎಂಐ5ನ ಮುಖ್ಯಸ್ಥ ಆ್ಯಂಡ್ಯೂ ಪಾರ್ಕರ್ (ಸಂಗ್ರಹ ಚಿತ್ರ) 
ದೇಶ

ಯುರೋಪ್‌ನಲ್ಲೂ ಉಗ್ರ ದಾಳಿ ಭೀತಿ!

ಫ್ರಾನ್ಸ್ ಬಳಿಕ ಈಗ ಯುರೋಪ್‌ನ ಇತರೆ ದೇಶಗಳಲ್ಲೂ ಉಗ್ರ ದಾಳಿ ಭೀತಿ..

ಲಂಡನ್: ಫ್ರಾನ್ಸ್ ಬಳಿಕ ಈಗ ಯುರೋಪ್‌ನ ಇತರೆ ದೇಶಗಳಲ್ಲೂ ಉಗ್ರ ದಾಳಿ ಭೀತಿ ಆರಂಭವಾಗಿದೆ.

ಪ್ಯಾರಿಸ್ ಮಾದರಿಯಲ್ಲೇ ಬ್ರಿಟನ್ ಮೇಲೂ ದಾಳಿ ನಡೆಸಲು ಅಲ್‌ಖೈದಾ ಉಗ್ರರು ಸಂಚು ರೂಪಿಸಿರುವ ವಿಚಾರ ಇದೀಗ ಬಹಿರಂಗವಾಗಿದೆ. ಸಿರಿಯಾದಲ್ಲಿರುವ ಅಲ್ ಖೈದಾ ಉಗ್ರರು ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ.

ಅದರಲ್ಲೂ ಮುಖ್ಯವಾಗಿ ಈ ದೇಶಗಳ ಪ್ರಮುಖ ಹಾಗೂ ಐತಿಹಾಸಿಕ ಸಾರಿಗೆ ಸಂಪರ್ಕ ಕೇಂದ್ರಗಳೇ ಉಗ್ರರ ಗುರಿ. ಈ ಮೂಲಕ ದೊಡ್ಡ ಮಟ್ಟದ ಜೀವಹಾನಿ ಮಾಡುವುದು ಅವರ ಉದ್ದೇಶ ಎಂದು ಬ್ರಿಟನ್ ಗುಪ್ತಚರ ಸಂಸ್ಥೆ ಎಂಐ5ನ ಮುಖ್ಯಸ್ಥ ಆ್ಯಂಡ್ಯೂ ಪಾರ್ಕರ್ ಎಚ್ಚರಿಸಿದ್ದಾರೆ.

ಬ್ರಿಟನ್ ಪೊಲೀಸರು ಮತ್ತು ಎಂಐ ಗುಪ್ತಚರ ಸಂಸ್ಥೆ ಈಗಾಗಲೇ ಉಗ್ರರ ಮೂರು ದಾಳಿಗಳನ್ನು ವಿಫಲಗೊಳಿಸಿದೆ. ಬ್ರಿಟನ್ ಮೇಲೆ ಉಗ್ರರ ದಾಳಿ ಆತಂಕ ಹೆಚ್ಚಾಗುತ್ತಿದ್ದು, ಭದ್ರತಾ ಸಂಸ್ಥೆಗಳು ಎಲ್ಲ ದಾಳಿಗಳನ್ನು ವಿಫಲಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಉಗ್ರರ ದಾಳಿ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬ್ರಿಟನ್‌ನ ಸೂಕ್ಷ್ಮಪ್ರದೇಶಗಳಲ್ಲಿ ಅದರಲ್ಲೂ ಮುಖ್ಯವಾಗಿ ಬಂದರು, ಏರ್‌ಪೋರ್ಟ್, ರೇಲ್ವೇ ನಿಲ್ದಾಣಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?