ದೇಶ

ಐಎಂಎಫ್ ವರದಿಯೇ ಸರಿ ಇಲ್ಲ: ಚೀನಾ

Vishwanath S

ಬೀಜಿಂಗ್: ಭಾರತದ ಆರ್ಥಿಕ ಪ್ರಗತಿ ದರ ಇನ್ನೊಂದು ವರ್ಷದಲ್ಲಿ ಚೀನಾಕ್ಕಿಂತ ಹೆಚ್ಚಲಿದೆ ಎಂಬುದಕ್ಕೆ ನಿಮ್ಮ ಬಳಿ ಏನು ಸಾಕ್ಷಿ ಇದೆ ಎಂದು ಚೀನಾ ಪ್ರಶ್ನಿಸಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ವರದಿಯಲ್ಲಿ 2016ರಲ್ಲಿ ಭಾರತದ ಬೆಳವಣಿಗೆ ದರ ಚೀನಾವನ್ನು ಹಿಂದಕ್ಕಲಿದೆ ಎಂದಿತ್ತು. ಇದನ್ನು ಪ್ರಶ್ನಿಸಿರುವ ಚೀನಾ, ಇದಕ್ಕೆ ಭಾರತದ ಬಳಿ ಯಾವ ಪುರಾವೆ ಇದೆ ಎಂಬುದನ್ನು ತೋರಿಸಲಿ ಎಂದು ವರದಿಯನ್ನೇ ಗೇಲಿ ಮಾಡಿದೆ.

ಭಾರತದ ಆರ್ಥಿಕ ವ್ಯವಸ್ಥೆಯೇ ಬೇರೆ. ಇಷ್ಟು ವರ್ಷ ಚೀನಾ ಬೆಳವಣಿಗೆಗೆ ಹೋಲಿಕೆ ಮಾಡಿದಲ್ಲಿ ಭಾರತ ಮಂಕಾಗಿತ್ತು. ಹೀಗಾಗಿ ಭಾರತಕ್ಕೂ ಸಹ ಚೀನಾಕ್ಕಿಂತ ತಾನು ಹೆಚ್ಚು ಬೆಳೆದಿದ್ದೇನೆ ಎಂದು ತೋರಿಸಿಕೊಳ್ಳಲು ಒಂದು ಆಧಾರ ಬೇಕಾಗಿತ್ತು ಎಂದಿದೆ.

SCROLL FOR NEXT