ಮಿಸ್ಡ್ ಕಾಲ್ (ಸಾಂದರ್ಭಿಕ ಚಿತ್ರ) 
ದೇಶ

ಪ್ರಾಣ ತೆಗೆದ 'ಮಿಸ್ಡ್ ಕಾಲ್‌'

ಯುವಕನೋರ್ವ ಯುವತಿಗೆ ಮಿಸ್ಡ್ ಕಾಲ್ ಕೊಟ್ಟು ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ನೆರೆಯ ಆಂಧ್ರಪ್ರದೇಶದಲ್ಲಿ ನಡೆದಿದೆ.

ಹೈದರಾಬಾದ್: ಯುವಕನೋರ್ವ ಯುವತಿಗೆ ಮಿಸ್ಡ್ ಕಾಲ್ ಕೊಟ್ಟು ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ನೆರೆಯ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಅದಿಲಾಬಾದ್ ಜಿಲ್ಲೆಯ ವೇಮನಪಲ್ಲಿ ತಾಲ್ಲೂಕಿನ ಜಕ್ಕಪಲ್ಲಿ ಗ್ರಾಮದ 25 ವರ್ಷದ ನಂದನ್ ಎಂಬಾತ ದುರಂತಕ್ಕೀಡಾದ ಯುವಕನಾಗಿದ್ದಾನೆ. ನಂದನ್ ತನ್ನದೇ ಗ್ರಾಮದ ಯುವತಿಯೋರ್ವಳನ್ನು ಇಷ್ಟಪಟ್ಟಿದ್ದು, ಸ್ನೇಹಿತರಿಂದ ಆಕೆಯ ಮೊಬೈಲ್ ನಂಬರ್ ಸಂಪಾದಿಸಿ ಅದಕ್ಕೆ ಮಿಸ್ಡ್‌ಕಾಲ್ ನೀಡಿದ್ದಾನೆ. ಆದರೆ ನಂದನ್ 'ಮಿಸ್‌' ಎಂದು ತಿಳಿದು ಮಿಸ್ಡ್ ಕಾಲ್ ನೀಡಿದ ಯುವತಿ ಬೇರೊಬ್ಬರಿಗೆ ಮಿಸಸ್ ಆಗಿದ್ದಳು ಎಂಬ ವಿಚಾರ ಮಾತ್ರ ಆತನಿಗೆ ತಿಳಿದಿರಲಿಲ್ಲ.

ಆತ್ತ ಯುವತಿಯು ತನ್ನ ಮೊಬೈಲ್‌ನಲ್ಲಿ ದಾಖಲಾಗಿದ್ದ ಹೊಸ ನಂಬರ್ ಯಾವುದು ಎಂದು ತಿಳಿಯಲು ಮತ್ತೆ ನಂದನ್ ಮೊಬೈಲ್‌ಗೆ ಫೋನಾಯಿಸಿದ್ದಾಳೆ. ಆಗ ಇಬ್ಬರ ನಡುವೆ ಪರಸ್ಪರ ಪರಿಚಯ ಬೆಳೆದಿದ್ದು, ದಿನಕಳೆದಂತೆ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಈ ವಿಚಾರ ಯುವತಿಯ ಗಂಡನಿಗೆ ತಿಳಿದಿದ್ದು, ಆಕ್ರೋಶಗೊಂಡ ಯುವತಿಯ ಗಂಡ ನಂದನ್‌ನನ್ನು ಕರೆಸಿಕೊಂಡು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾನೆ. ನೀವು ಫೋನಿನಲ್ಲಿ ಮಾತನಾಡುತ್ತಿರುವ ವಿಚಾರ ನನಗೆ ತಿಳಿದಿದ್ದು, ಈ ಕೂಡಲೇ ಇದನ್ನು ನಿಲ್ಲಿಸಿ. ಇಲ್ಲವಾದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಟೆಲಿಫೋನ್ ರೆಕಾರ್ಡಿಂಗ್ ದಾಖಲೆಯನ್ನು ನೀಡುವುದಾಗಿ ಎಚ್ಚರಿಕೆ ನೀಡಿದ್ದಾನೆ.

ಯುವತಿಯ ಗಂಡನ ಎಚ್ಚರಿಕೆಯಿಂದಾಗಿ ಭೀತಿಗೊಂಡ ನಂದನ್, ಎಲ್ಲಿ ತನ್ನ ಈ ವಿಚಾರ ಗ್ರಾಮದಲ್ಲಿ ಬಹಿರಂಗವಾಗಿ ತನ್ನ ಮರ್ಯಾದೆ ಹಾಳಾಗುತ್ತದೆಯೋ ಎಂದು ಹೆದರಿ, ಸಮೀಪದ ಅರಣ್ಯದೊಳಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ತಮಿಳುನಾಡು ಸಿಎಂ ವಿಜಯ್-ಪ್ರಧಾನಿ ಮೋದಿ ಭೇಟಿ: ಎರಡು ದೊಡ್ಡ ಬೇಡಿಕೆ; ಇಲ್ಲಿದೆ ವಿವರ..

'ಬಹುಶಃ ರಾಹುಲ್ ಗಾಂಧಿಗೆ ಈಗ ತೃಪ್ತಿಯಾಗಿರಬಹುದು': ED ದಾಳಿ ಕುರಿತು ಮಾಜಿ ಸಿಎಂ ಪಿಣರಾಯಿ ವಿಜಯನ್ ಕಿಡಿ

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

SCROLL FOR NEXT