ದೇಶ

ಗಮನ ಸೆಳೆದ ಸ್ತಬ್ಧಚಿತ್ರಗಳು

Srinivasamurthy VN

ನವದೆಹಲಿ: ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಪ್ರದರ್ಶನವು ನೆರೆದಿದ್ದವರ ಗಮನ ಸೆಳೆಯಿತು.

ಮುಖ್ಯವಾಗಿ ಕರ್ನಾಟಕದ ಆನೆ ಬಂತು ಆನೆ.. ಯಾವೂರು ಆನೆ.. ಚನ್ನಪಟ್ಟಣದ ಆನೆ.. ಎಂಬ ಹಾಡಿನೊಂದಿಗೆ ಹೆಜ್ಜೆ ಹಾಕಿದ ಕರ್ನಾಟಕದ ಗೊಂಬೆಗಳ ಸ್ತಬ್ದ ಚಿತ್ರ ಎಲ್ಲರ ಗಮನ ಸೆಳೆಯಿತು. ಉಳಿದಂತೆ ರೇಲ್ವೇ ಸಚಿವಾಲಯ, ಹಣಕಾಸು ಸಚಿವಾಲಯದ ಸ್ತಬ್ಧ ಚಿತ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೆಣ್ಣು ಶಿಶು  ಬೆಂಬಲಿಸಸುವ ಸ್ತಬ್ಧ ಚಿತ್ರ, ಕಾನೂನು ಸಚಿವಾಲಯದ ನ್ಯಾಯಾಲಯದ ಸ್ತಬ್ದ ಚಿತ್ರ, ಗ್ರಾಮೀಣಾಭಿವೃದ್ದಿ ಪಂಚಾಯತ್‌ ರಾಜ್‌ ಇಲಾಖೆಯ ಗ್ರಾಮೀಣ ಜನಜೀವನ ಪರಿಚಯಿಸುವ ಸ್ತಬ್ಧ ಚಿತ್ರ, ಪರಮಾಣು ವಿಭಾಗದ ಶಾಂತಿ ಸಾರುವ  ಸ್ತಬ್ಧ ಚಿತ್ರ, ಆರೋಗ್ಯ ಇಲಾಖೆಯ ಆರೋಗ್ಯಕ್ಕಾಗಿ ಯೋಗ, ಆಯುರ್ವೇದದ ಬಗ್ಗೆ ಪರಿಚಯಿಸುವ ಸ್ತಬ್ದ ಚಿತ್ರ, ಕೆಂದ್ರೀಯ ಲೋಕ ಸೇವಾ ಆಯೋಗದ ಪವಿತ್ರ ಗಂಗಾನದಿಯ ಸ್ತಬ್ದ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯಿತು.

ಇದಲ್ಲದೆ ಕೈಗಾರಿಕಾ ಇಲಾಖೆಯ ಮೇಕ್‌ ಇನ್‌ ಇಂಡಿಯಾ ಬರಹ ಹೊಂದಿದ್ದ ಸ್ತಬ್ದ ಚಿತ್ರ ಎಲ್ಲರನ್ನೂ ಆಕರ್ಷಿಸುವಂತಿತ್ತು. ಸರ್ದಾರ್‌ ಪಟೇಲ್‌ರ ಪ್ರತಿಮೆ ಒಳಗೊಂಡಿದ್ದ ಗುಜರಾತ್‌ನ ಸ್ತಬ್ದ ಚಿತ್ರ, ಮಹಾರಾಷ್ಟ್ರದ ಪಂಡರಾಪುರ ಯಾತ್ರೆ ಬಿಂಬಿಸುವ  ಸ್ತಬ್ಧ ಚಿತ್ರ ಅತ್ಯಾಕರ್ಷಕವಾಗಿತ್ತು, ಅರುಣಾಚಲ ಪ್ರದೇಶದ ಸ್ತಬ್ಧ ಚಿತ್ರ, ಛತ್ತಿಸ್‌ಘಡದ ಬುಡಕಟ್ಟು ಸಾಂಪ್ರದಾಯ ಬಿಂಬಿಸುವ ಸ್ತಬ್ಧ ಚಿತ್ರ, ಹರಿಯಾಣದ ಸುಲ್ತಾನ್‌ ಪುರ ಅರಣ್ಯದ ಪಕ್ಷಿಗಳ ಕಲರವದ ಸ್ತಬ್ಧ ಚಿತ್ರ  ಅತ್ಯಾಕರ್ಷಕವಾಗಿತ್ತು, ಜಮ್ಮು ಮತ್ತು ಕಾಶ್ಮೀರದ ಸರ್ವಜನಾಂಗವನ್ನು ಬಿಂಬಿಸುವ ಸ್ತಬ್ಧ ಚಿತ್ರ, ಅಸ್ಸಾಂ ಜಾನಪದ ಕಲೆ ಬಿಂಬಿಸುವ, ಜಾರ್ಖಂಡ್‌, ಸಿಕ್ಕಿಂ ಮತ್ತು ತೆಲಂಗಾಣದ ಬೋನಾಲು ಆಕರ್ಷಕ ಸ್ತಬ್ಧ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿದ್ದವು.

ಅಂತೆಯೇ ಉತ್ತರ ಖಂಡ ರಾಜ್ಯದ ದ ಕೇದಾರನಾಥ , ಮಹಾರಾಷ್ಟ್ರದ ಸ್ಥಳೀಯ ಜನಜೀವನವನ್ನು ಬಿಂಬಿಸುವ ಮರಾಠಿ ಸ್ತಬ್ಧ ಚಿತ್ರಗಳು  ಮತ್ತು  ಗೋವಾದ ಮೀನುಗಾರಿಕೆಯನ್ನು ಬಿಂಬಿಸುವ ಏಡಿಯ ಸ್ತಬ್ಧ ಚಿತ್ರಗಳು ಗಮನ ಸೆಳೆದವು.

SCROLL FOR NEXT