ದೇಶ

`ರಾ'ದಿಂದ ಕಾಶ್ಮೀರ ಉಗ್ರರು ರಾಜಕೀಯ ಪಕ್ಷಗಳಿಗೆ ಹಣ

Mainashree

ನವದೆಹಲಿ: ಬೇಹುಗಾರಿಕಾ ಸಂಸ್ಥೆಯ (ರಾ) ಮಾಜಿ ಮುಖ್ಯಸ್ಥ ಎ. ಎಸ್. ದುಲಾತ್ ಬಯಲಿಗೆಳೆಯುತ್ತಿರುವ ಒಂದೊಂದೇ ಸತ್ಯ ಸಂಗತಿಗಳು, ಭಾರತದ ರಾಜಕೀಯ ರಂಗದಲ್ಲಿ ಭಾರೀ ಸಂಚಲನ ಉಂಟು ಮಾಡುತ್ತಿವೆ. ಕಂದಹಾರ್ ವಿಮಾನ ಅಪಹರಣ ಪ್ರಕರಣ ದುಲಾತ್ ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

1988ರಲ್ಲಿ ಬೇಹುಗಾರಿಕೆ ಸಂಸ್ಥೆಯ ಜಮ್ಮುಕಾಶ್ಮೀರ ವಿಭಾಗದ ಮುಖ್ಯಸ್ಥರಾಗಿದ್ದ ದುಲಾತ್ ಇಂಥ ಮತ್ತಷ್ಟು ಸಂಗತಿಗಳನ್ನು ಬಯಲಿಗೆಳೆದಿದ್ದಾರೆ. ``ಭಾರತೀಯ ಬೇಹುಗಾರಿಕಾ ಸಂಸ್ಥೆಯು ಭಯೋತ್ಪಾದರಿಗೆ, ಬಂಡುಕೋರರಿಗೆ, ಹುರಿಯತ್ ಮುಖ್ಯಸ್ಥರು, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮುಖ್ಯಸ್ಥರಿಗೆ ನಿಯಮಿತವಾಗಿ ಹಣ ಸಂದಾಯ ಮಾಡುತ್ತಿತ್ತು,'' ಎಂದು `ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ'ಗೆ ನೀಡಿರುವ ಸಂದರ್ಶನ ದಲ್ಲಿ ಹೇಳಿದ್ದಾರೆ.

``ಯಾರೊಬ್ಬರೂ ಲಂಚದಿಂದ ಹೊರತಾಗಿಲ್ಲ. ಉಗ್ರಗಾಮಿಗಳು, ರಾಜಕೀ ಯ ನಾಯಕರು, ಪ್ರತ್ಯೇಕತಾವಾದಿಗಳು ಹೀಗೆ ಎಲ್ಲರೂ ಬೇಹುಗಾರಿಕಾ ಸಂಸ್ಥೆಯಿಂದ ವರ್ಷಗಳ ಕಾಲ ಹಣ ಪಡೆದಿದ್ದಾರೆ. ಐಎಸ್‍ಐ ಸಂಘಟನೆ ಏನು ಮಾಡಲಿದೆ, ಅದಕ್ಕೆ ವಿರುದಟಛಿವಾಗಿ ನಾವೇನು ಮಾಡಬಲ್ಲೆವು ಎಂಬುದನ್ನು ಮೊದಲೇ ಅರಿಯಲು ನಾವು ಹಣ ನೀಡಿದ್ದೇವೆ,'' ಎಂದು 2004ರವರೆಗೆ ವಾಜಪೇಯಿ ಅವರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ದುಲಾತ್ ತಿಳಿಸಿದ್ದಾರೆ. ``1990ರ ಹೊತ್ತಿಗೆ ಭಾರತದಲ್ಲಿ ಭಯೋತ್ಪಾದನೆ ಆಗಷ್ಟೇ ಬೇರು ಬಿಡುತ್ತಿತ್ತು. ಈ ಹಂತದಲ್ಲಿ ಅವರಿಗೆ ಹಣ ನೀಡಲು ಆರಂಬಿsಸಲಾಗಿತ್ತು.

ನೂರರಿಂದ ಆರಂಭವಾದ ಲಂಚದ ಹಣ ಕೊನೆ ಕೊನೆಗೆ ಲಕ್ಷಗಳಿಗೆ ತಲುಪಿತ್ತು. ಆದರೆ, ಎಲ್ಲರೂ ಲಂಚ ಪಡೆಯುತ್ತಿದ್ದರು ಎಂದು ಹೇಳಲು ಸಾಧ್ಯವಿಲ್ಲ.'' ``ನನ್ನ ಅಧಿಕಾರವಧಿಯಲ್ಲೂ ಲಂಚ ನೀಡುವ ಈ ಪರಿಪಾಠ ಮುಂದುವರಿಯಿತು. ಆದರೆ, ಯಾರು ಯಾರಿಗೆ, ಯಾವ ಮೂಲಕ ಎಷ್ಟು ಹಣ ಸಂದಾಯ ಮಾಡುತ್ತಿದ್ದಾರೆ ಎಂಬುದನ್ನು ನಾನು 1988ರಲ್ಲಿ ಶ್ರೀನಗರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಪತ್ತೆ ಮಾಡಿದ್ದೆ,'' ಎಂದಿರುವ ಅವರು, ``ಜಗತ್ತಿನಲ್ಲಿ ಎಲ್ಲ ಬೇಹುಗಾರಿಕಾ ಸಂಸ್ಥೆಗಳು ಹೀಗೆ ಹಣ ಸಂದಾಯ ಮಾಡುತ್ತವೆ'' ಎಂದೂ ಹೇಳಿದ್ದಾರೆ. ಲಂಚ ಪಡೆದಿಲ್ಲ: ದೌಲತ್ ಹೇಳಿಕೆಯನ್ನು ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಪಕ್ಷಗಳು ಸಾರಾಸಗಟಾಗಿ ತಳ್ಳಹಾಕಿವೆ.

SCROLL FOR NEXT