ನವದೆಹಲಿ: ದೇಶಾದ್ಯಂತ ಮ್ಯಾಗಿ ನಿಷೇಧಿಸಿದ ಒಂದು ತಿಂಗಳಲ್ಲಿ ಇನ್‌ಸ್ಟೆಂಟ್ ನೂಡಲ್ಸ್ ಮಾರಾಟವು ಶೇಕಡ 90ರಷ್ಟು ಕುಸಿದಿದ್ದು, ಮಾಸಿಕ 350 ಕೋಟಿಯಿಂದ 30 ಕೋಟಿ ರುಪಾಯಿಗೆ ಕುಸಿದಿದೆ ಎಂದು ಕೈಗಾರಿಕೆ ಅಂದಾಜು ತಿಳಿಸಿದೆ.
ಆಹಾರ ಸಂಸ್ಕರಣೆ ಕೈಗಾರಿಕೆ ಉದ್ಯಮಿಗಳು ಇದು ನಮ್ಮ ಒಟ್ಟಾರೆ ಬಂಡವಾಳ ಯೋಜನೆಗಳ ಮೇಲೆ ಪರಿಣಾಮ ಬೀರುತ್ತದೆಂದು ಅವರು ಚಿಂತೆಗೀಡಾಗಿದ್ದಾರೆ. ಕಂಪೆನಿಗಳು ಸುರಕ್ಷತೆ ತಪಾಸಕರಿಂದ ಹೆಚ್ಚಿದ ಕಿರುಕುಳವನ್ನು ಎದುರಿಸುತ್ತಿದೆ ಎಂದು ಕೈಗಾರಿಕೆ ಸಂಸ್ಥೆ ಅಸೋಚಾಮ್ ಹಿರಿಯ ಅಧಿಕಾರಿ ಹೇಳಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಇನ್‌ಸ್ಟೆಂಟ್ ನೂಡಲ್ಸ್ ವಿಭಾಗದ ಮಾರಾಟವು ತಿಂಗಳಿಗೆ 30 ಕೋಟಿ ರು.ಗಳಿಗೆ ಭಾರೀ ಕುಸಿತ ಉಂಟಾಗಿದೆ. ಮ್ಯಾಗಿಯನ್ನು ನಿಷೇಧಿಸುವ ಮುಂಚೆ ಈ ವಿಭಾಗವು ವಾರ್ಷಿಕ 4200 ಕೋಟಿ ವಹಿವಾಟು ನಡೆಸಿತ್ತು. ಅಂದರೆ ತಿಂಗಳಿಗೆ ಸುಮಾರು 350 ಕೋಟಿ ರು. ಈಗ ಗ್ರಾಹಕರಿಗೆ ಒಂದು ರೀತಿಯ ಮಾನಸಿಕ ಭಯ ಆವರಿಸಿದೆ ಎಂದು ಅಧಿಕಾರಿ ತಿಳಿಸಿದರು.