ಪಾಕ್ ಬಾಲಕನೊಂದಿಗೆ ಭಾರತೀಯ ಸೇನಾಧಿಕಾರಿಗಳು 
ದೇಶ

ಭಾರತಕ್ಕೆ ನುಸುಳಿದ್ದ 11 ವರ್ಷದ ಬಾಲಕ ಪಾಕ್ ಗೆ ಹಸ್ತಾಂತರ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಆಕಸ್ಮಿಕವಾಗಿ ಭಾರತದ ಗಡಿ ಪ್ರವೇಶಿಸಿದ್ದ 11 ವರ್ಷದ ಬಾಲಕನನ್ನು ಭಾರತೀಯ ಸೇನೆ ಮತ್ತೆ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ...

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಆಕಸ್ಮಿಕವಾಗಿ ಭಾರತದ ಗಡಿ ಪ್ರವೇಶಿಸಿದ್ದ 11 ವರ್ಷದ ಬಾಲಕನನ್ನು ಭಾರತೀಯ ಸೇನೆ ಮತ್ತೆ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.

ಬಾಲಕ ಸಮೀರ್ ಕಯಾನಿಯನ್ನು ಬರಿಗೈಲಿ ಕಳುಹಿಸಲು ಒಪ್ಪದ ಭಾರತೀಯ ಸೇನಾಧಿಕಾರಿಗಳು ಆತನಿಗೆ ಸಿಹಿತಿಂಡಿ ಮತ್ತು ಹೊಸ ಬಟ್ಟೆಗಳೊಂದಿಗೆ ಪಾಕಿಸ್ತಾನಕ್ಕೆ ಕಳುಹಿಸಿದ್ದಾರೆ.

ಕಳೆದ ಗುರುವಾರ ಪಾಕ್ ಆಕ್ರಮಿತ ಕಾಶ್ಮೀರದ ಅತ್ಮುಕುಮ್‌ನ ಪಾಸ್ವಾ ಪ್ರದೇಶದಿಂದ ಸಮೀರ್ ಕಯಾನಿ ಆಕಸ್ಮಿಕವಾಗಿ ಭಾರತದ ಗಡಿ ಪ್ರವೇಶಿಸಿದರಿಂದ ಬಾಲಕನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದರು. ನಂತರ ಭಾರತೀಯ ಸೇನಾಧಿಕಾರಿಗಳು ಬಾಲಕನ ಬಂಧನ, ಯೋಗಕ್ಷೇಮದ ಕುರಿತಾಗಿ ಪಾಕಿಸ್ತಾನ ಸೇನೆಗೆ ಕ್ಷಿಪ್ರವಾಗಿ ಹಾಟ್‌ಲೈನ್ ಸಂದೇಶ ಕಳುಹಿಸಿ, ಆತನನ್ನು ಮರಳಿಸುವ ನಿಟ್ಟಿನಲ್ಲಿ ಧ್ವಜ ಸಮಾವೇಶ ಏರ್ಪಡಿಸಲು ಸಂದೇಶ ರವಾನಿಸಿದ್ದರು.

'ತೀತ್ವಾಲ್ ಕ್ರಾಸಿಂಗ್ ಪಾಯಿಂಟ್‌ನಲ್ಲಿ ನಡೆದ ಧ್ವಜ ಸಮಾವೇಶದಲ್ಲಿ ಪಾಕಿಸ್ತಾನದ ಪ್ರತಿನಿಧಿಗಳಿಗೆ ಬಾಲಕನನ್ನು ಹಸ್ತಾಂತರಿಸಲಾಗಿದ್ದು, ಬಾಲಕನಿಗೆ ಹೊಸಬಟ್ಟೆ ಮತ್ತು ಆತನ ಮನೆಯವರಿಗೆ ಸಿಹಿ ತಿಂಡಿಯನ್ನು ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಪಶ್ಚಿಮ ಬಂಗಾಳ ಉಪ ಚುನಾವಣೆ: ಪೊಲೀಸರೊಂದಿಗೆ ಮಾತಿನ ಚಕಮಕಿ: ಶಾಸಕ ಹುಮಾಯೂನ್ ಕಬೀರ್ ಬಂಧನ

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್