ನವದೆಹಲಿ: ದೇಶದಾದ್ಯಂತ ವ್ಯಾಪಂ ಹಗರಣ ಭಾರಿ ಸದ್ದು ಮಾಡುತ್ತಿದ್ದರೂಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಅವರು, ಇದೇ ಮೊದಲ ಬಾರಿಗೆ ತಮ್ಮ ಮೌನ ಮುರಿದಿದ್ದು, ಪ್ರಧಾನಮಂತ್ರಿ ಏಕೆ ಮಧ್ಯಪ್ರದೇಶಮುಖ್ಯಮಂತ್ರಿ ಚೌಹಾಣ್ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗುರುವಾರ ಪ್ರಶ್ನಿಸಿದ್ದಾರೆ.
ಲಲಿತ್ ಮೋದಿ ಅಕ್ರಮವಲಸೆ ಕುರಿತಂತೆ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದ ರಾಹುಲ್ ಇದೀಗ ಮತ್ತೆ ವ್ಯಾಪಂ ಹಗರಣಸಂಬಂಧ ಮೋದಿ ವಿರುದ್ಧ ತನ್ನ ವಾಗ್ಧಾಳಿ ಮುಂದುವರೆಸಿದ್ದು, ಲೋಕಸಭೆ ಚುನಾವಣಾ ಸಂದರ್ಭದಲ್ಲಿಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳುತ್ತಿದ್ದ ಮೋದಿ ಅವರ ಮಾತುಗಳು ಈಗಲೂ ನೆನಪಿದೆ.ಅಂದು ಮೋದಿ ಅವರು ಭ್ರಷ್ಟಾಚಾರದಲ್ಲಿ ಎಂದಿಗೂ ತೊಡಗುವುದಿಲ್ಲ. ತೊಡಗಿಕೊಳ್ಳುವವರಿಗೂ ಅವಕಾಶ ನೀಡುವುದಿಲ್ಲಎಂದು ಹೇಳಿದ್ದರು. ಈಗೇಕೆ ತಮ್ಮ ಪಕ್ಷದ ಮಂತ್ರಿಗಳೇ ಭ್ರಷ್ಟಾರದಲ್ಲಿ ತೊಡಗಿದ್ದರೂ,ಸುಮ್ಮನಿದ್ದಾರೆ. ಮೋದಿ ಈವರೆಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಹೇಳಿದ್ದಾರೆ.
ಯುಪಿಎ ಸರ್ಕಾರದಅವಧಿಯಲ್ಲಿ ಲಲಿತ್ ಮೋದಿ ಹಾಗೂ ವ್ಯಾಪಂ ಹಗರಣದಂತಹ ಸಾಕಷ್ಟು ಹಗರಣಗಳ ಸಂಖ್ಯೆ ಹೆಚ್ಚುತ್ತಿದೆ. ಲಲಿತ್ಮೋದಿ ಪ್ರಕರಣದಲ್ಲಿ ವಸುಂದರಾ ರಾಜೇ, ಸುಷ್ಮಾ ಸ್ವರಾಜ್ ವಿರುದ್ಧ ಆರೋಪಗಳು ಕೇಳಿಬರುತ್ತಿದ್ದರೂಅವರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿದೆ.ಇದೀಗ ವ್ಯಾಪಂ ಹಗರಣದಂತೆಹ ದೊಡ್ಡ ಹಗರಣ ದೇಶದಾದ್ಯಂತ ಸುದ್ದಿ ಮಾಡುತ್ತಿದ್ದರೂ ಮೋದಿ ಯಾವುದೇಕ್ರಮ ಕೈಗೊಳ್ಳುತ್ತಿಲ್ಲವೇಕೆ. ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಪ್ರಮಾಣವನ್ನು ಮೋದಿ ಮುರಿಯುತ್ತಿದ್ದಾರೆಎಂದು ಹೇಳಿದ್ದಾರೆ.