ದೇಶ

ಕುಡಿಯಲು ಹಣ ಕೇಳಿ ಪೀಡಿಸುತ್ತಿದ್ದ ಹಿರಿಯ ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿಸಿದ ಕಿರಿಯ ವಿದ್ಯಾರ್ಥಿ!

Srinivas Rao BV

ಚೆನ್ನೈ: ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದ ಹಿರಿಯ ವಿದ್ಯಾರ್ಥಿಗೆ ಆತನ ಜೂನಿಯರ್ ಹಿಗ್ಗಾಮುಗ್ಗ ಥಳಿಸಿದ ಘಟನೆ ಚೆನ್ನೈ ನ ಕಾಲೇಜಿನಲ್ಲಿ ನಡೆದಿದೆ.

ಕಾಲೇಜು ಗ್ರಂಥಾಲಯದ ಬಳಿ ಈ ಘಟನೆ ನಡೆದಿದ್ದು ಹಲ್ಲೆ ನಡೆಸಿದ ಕಿರಿಯ ವಿದ್ಯಾರ್ಥಿ ವಿರುದ್ಧ ಬಾಲಾಪರಾಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಂತಿಮ ವರ್ಷದ ಬಿ.ಎ ಎಕೆನಾಮಿಕ್ಸ್ ವ್ಯಾಸಂಗ ಮಾಡುತ್ತಿದ್ದ ಮಾರಿ ಎಂಬ ವಿದ್ಯಾರ್ಥಿ ತನ್ನ ಕಿರಿಯ ವಿದ್ಯಾರ್ಥಿ ಬಳಿ ಕುಡಿಯಲು ಹಣ ಕೇಳಿದ್ದಾನೆ. ಆದರೆ ಹಣ ನೀಡಲು ನಿರಾಕರಿಸಿರುವ ಪ್ರಥಮ ವರ್ಷದ ವಿದ್ಯಾರ್ಥಿ ಹಿರಿಯ ವಿದ್ಯಾರ್ಥಿಯನ್ನು ಅಟ್ಟಾಡಿಸಿ ಥಳಿಸಿದ್ದಾನೆ.

ಈ ಘಟನೆ ನಡೆದ ಬಳಿಕ ಥಳಿತಕ್ಕೊಳಗಾದ ವಿದ್ಯಾರ್ಥಿಯ ಸಹಚರ ಸ್ಟೀಫನ್(19 ) ಪ್ರಥಮ ವರ್ಷದ ವಿದ್ಯಾರ್ಥಿ ತರಗತಿಗೆ ಬಂದು ತನ್ನ ಸ್ನೇಹಿತನಿಗೆ ಥಳಿಸಿದ್ದರ ಬಗ್ಗೆ ಪ್ರಶ್ನಿಸಿದ್ದಾನೆ, ಇದರಿಂದ ಮತ್ತಷ್ಟು ಕೋಪಗೊಂಡ ಕಿರಿಯ ವಿದ್ಯಾರ್ಥಿ, ಸ್ಟೀಫನ್ ತಲೆಗೆ ಹೆಲ್ಮೆಟ್ ನಿಂದ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಸ್ಟೀಫನ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹಿರಿಯ ವಿದ್ಯಾರ್ಥಿಗಳಿಗೆ ಥಳಿಸಿದ್ದ ಯುವಕನ ವಿರುದ್ಧ ಐಪಿಸಿ ಸೆಕ್ಷನ್ 341 , 324  506  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮದ್ಯಪಾನ ಮಾಡುವುದಕ್ಕಾಗಿ ಹಣ ಕೇಳಿ ಪೀಡಿಸುತ್ತಿದ್ದ ಹಿರಿಯ ವಿದ್ಯಾರ್ಥಿ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಸರ್ ತ್ಯಾಗರಾಯ ಕಾಲೇಜಿಗೆ ರಜೆ ಘೋಷಿಸಲಾಗಿತ್ತು.

SCROLL FOR NEXT