ಯಾಕುಬ್ ಪತ್ನಿ ರಹೀನ್ ಮೆಮನ್ 
ದೇಶ

ದಯವಿಟ್ಟು ನಮ್ಮ ಮೇಲೆ ಕರುಣೆ ತೋರಿಸಿ, ನಾವು ಸಾಕಷ್ಟು ನೊಂದಿದ್ದೇವೆ: ಯಾಕುಬ್ ಪತ್ನಿ ರಹೀನ್ ಮೆಮನ್

ತನ್ನ ಪತಿ ಈಗಾಗಲೇ 20 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಆ ಸಮಯದಲ್ಲಿ ಯಾಕುಬ್ ಮತ್ತು ನಾವು ಬಹಳ ಕಷ್ಟ ಅನುಭವಿಸಿದ್ದೇವೆ...

ಮುಂಬೈ: ಗಲ್ಲು ಶಿಕ್ಷೆಗೆ ಗುರಿಯಾಗಿರುವ ಯಾಕುಬ್ ಮೆಮನ್ ಗೆ  ಕ್ಷಮಾದಾನ ನೀಡಬೇಕೆಂದು ಆತನ ಪತ್ನಿ ರಹೀನ್ ಮೆಮನ್ ತಿಳಿಸಿದ್ದಾಳೆ.

ತನ್ನ ಪತಿ ಈಗಾಗಲೇ 20 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಆ ಸಮಯದಲ್ಲಿ ಯಾಕುಬ್ ಮತ್ತು ನಾವು ಬಹಳ ಕಷ್ಟ ಅನುಭವಿಸಿದ್ದೇವೆ. ನಮ್ಮ ಮೇಲೆ ಕರುಣೆ ತೋರಿ ಯಾಕುಬ್ ಮೇಲೆ ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ಬದಲಿಸುವಂತೆ ಸಂಬಂಧಪಟ್ಟವರನ್ನು ನಾವು ಕೋರುತ್ತೇವೆ ಎಂದು ರಹೀನ್ ಮೆಮನ್ ಕೋರಿದ್ದಾಳೆ.

ಮುಂಬೈ ಬಾಂಬ್ ಸ್ಪೋಟದ ನಂತರ ಯಾಕುಬ್ ಶರಣಾಗಿದ್ದಾರೆ. ವಿಚಾರಣೆ ಸಮಯದಲ್ಲಿಯೂ ಅವರು ಸಹಕಾರ ನೀಡಿದ್ದರು. ನಾವು ದೇವರ ಮೇಲೆ ಭಾರ ಹೊತ್ತು ಕುಳಿತಿದ್ದೇವೆ. ನಮಗೆ ಭಾರತ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ ಎಂದು ಹೇಳಿದಳು.

ಯಾಕುಬ್ ಮೆಮನ್ ನ್ನು ಅವನ ಹುಟ್ಟಿದ ದಿನವಾದ ಜುಲೈ 30ರಂದೇ ಗಲ್ಲಿಗೆ ಏರಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಯಾಕುಬ್ ತನಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅದು ನಾಳೆ ವಿಚಾರಣೆಗೆ ಬರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT