ಬೆಂಗಳೂರು: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ನಿಧನರಾದರು ಎಂಬ ಸುದ್ದಿ ಬರುತ್ತಿದ್ದಂತೆಯೇ ವಾಟ್ಸಾಪ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ತಾಣದಲ್ಲಿ ಅಬ್ದುಲ್ ಕಲಾಂ ಕುಸಿದು ಬೀಳುತ್ತಿರುವ ಫೋಟೋವೊಂದು ಸಿಕ್ಕಾಪಟ್ಟೆ ಹರಿದಾಡಿತ್ತು. ಅಬ್ದುಲ್ ಕಲಾಂ ಅವರು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ನಿಧನರಾಗಿದ್ದಾರೆ. ಅವರ ಕೊನೆಯ ಫೋಟೋ ಇದು ಎಂಬ ಶೀರ್ಷಿಕೆ ಹೊತ್ತ ಆ ಫೋಟೋ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿತ್ತು.
ನಿಜವಾಗಿಯೂ ಅದು ಕಲಾಂ ಅವರ ಕೊನೇ ಕ್ಷಣದ ಫೋಟೋ ಅಲ್ಲ. 8 ವರ್ಷಗಳ ಹಿಂದೆ ಸಂಗೀತ ನಾಟಕ ಅಕಾಡೆಮಿಯೊಂದರ ಕಾರ್ಯಕ್ರಮದಲ್ಲಿ ಕಲಾಂ ಅವರು ಜಾರಿ ಬಿದ್ದಾಗ ತೆಗೆದ ಫೋಟೋ ಅದಾಗಿತ್ತು. ಈ ಹಳೇ ಫೋಟೋ ನಿನ್ನೆ ಕಲಾಂ ನಿಧನರಾದಾಗ ಅವರ ಕೊನೆಯ ಫೋಟೋ ಎಂಬ ಹಣೆಪಟ್ಟಿ ಹೊತ್ತು ಅಂತರ್ಜಾಲದಲ್ಲಿ ಹರಿದಾಡಿತ್ತು.