ದೇಶ

ಪಾಕಿಸ್ತಾನದ ಓರ್ವ ಜವಾನ ಭಾರತಕ್ಕೆ ಅಜಿತ್ ದೋವಲ್ ಗಿಂತ ಉತ್ತಮ ಸಲಹೆಗಾರನಾಗಬಲ್ಲ: ಪಾಕ್ ಪತ್ರಕರ್ತ

Srinivas Rao BV

ಇಸ್ಲಾಮಾಬಾದ್: ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ ಭಾರತದ ರಾಷ್ಟ್ರೀಯ ಭದ್ರತೆ ಸಲಹೆಗಾರರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿದೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗಿಂತಲೂ ಪಾಕಿಸ್ತಾನದ ಜವಾನ, ಅಗಸ, ಡಿ ಗ್ರೇಡ್ ಕೆಲಸಗಾರನೊಬ್ಬ ಭಾರತಕ್ಕೆ ಉತ್ತಮ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಲು ಅರ್ಹ ಎಂದು ಪಾಕಿಸ್ತಾನದ ರಾಜಕೀಯ ಬರಹಗಾರ, ಪತ್ರಕರ್ತ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಟಿವಿಯ ಕಾರ್ಯಕ್ರಮವೊಂದರಲ್ಲಿ ನಿರೂಪಣೆ ಮಾಡುತ್ತಿದ್ದ ಡಾ. ಶಾಹಿದ್ ಮಸೂದ್ ಎಂಬ ಪತ್ರಕರ್ತ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗೆ ದೊರೆತಿದ್ದ ಪ್ರಚಾರದಿಂದ ಇಷ್ಟು ದಿನಗಳು ಅವರಿಗೆ ಗೌರವ ನೀಡಬೇಕಾಗಿತ್ತು. ಅಜಿತ್ ದೋವಲ್ ಗಿಂತಲೂ ಪಾಕಿಸ್ತಾನದ ಒಬ್ಬ ಜವಾನ ಉತ್ತಮ ಕೆಲಸಗಳನ್ನು ಮಾಡಬಲ್ಲ ಎಂಬುದು ಇತ್ತೀಚೆಗಷ್ಟೇ ಪಂಜಾಬ್ ನ ಗುರ್ದಾಸ್ ಪುರದಲ್ಲಿ ನಡೆದ ಸೇನಾ ಕಾರ್ಯಾಚರಣೆಯಿಂದ ಸ್ಪಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುರ್ದಾಸ್ ಪುರದ ಘಟನೆಯನ್ನು ರಾ(ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್) ನ ಕಾರ್ಯಾಚಾರಣೆ ಎಂದು ಹೇಳಿರುವ ಡಾ.ಶಾಹಿದ್ ಮಸೂದ್, ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆಗೊಳಿಸಿದ್ದಾನೆ. ಈ ಕಾರ್ಯಾಚರಣೆಗಾಗಿ ರಾ ನಟನೆ ಮಾಡುವವರ ತಂಡವನ್ನೇ ಹೊಂದಿತ್ತು ಎಂದು ವ್ಯಂಗ್ಯವಾಡಿದ್ದಾನೆ. ನಟನೆ ಮಾಡುವವರಿಗೆ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರಂತೆ ವೇಷ ಹಾಕಿಸುತ್ತದೆ. ನಂತರ ಅವರ ಕೈಗೆ ಪಾಕಿಸ್ತಾನ ಹಾಗೂ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಬಾವುಟವನ್ನು ಕೊಟ್ಟು ಕಾಶ್ಮೀರದ ಕಡೆಗೆ ಕಳಿಸುತ್ತಾರೆ. ಇಂಥದ್ದೇ ತಂಡವೊಂದನ್ನು ಪಂಜಾಬ್ ಗೂ ಕಳಿಸಲಾಗಿದೆ ಎಂದು ಮಸೂದ್ ಹೇಳಿದ್ದಾನೆ.
ಅಲ್ಲದೇ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಸೈನಿಕರು, ಮುಸ್ಲಿಮರಿಗೆ ವರ್ಜ್ಯವಾಗಿರುವ ಹಂದಿಗಳನ್ನು ಎಸೆಯುತ್ತಿರುತ್ತಾರೆ ಎಂದು ಪಾಕಿಸ್ತಾನದ ಪತ್ರಕರ್ತ ಅಳಲು ತೋಡಿಕೊಂಡಿದ್ದಾನೆ. ಅಜಿತ್ ದೋವಲ್ ಗೆ ಬಾಲಿವುಡ್ ನಲ್ಲಿ ಉತ್ತಮ ಭವಿಷ್ಯವಿದ್ದು ಆಟ ಪರೇಶ್ ರಾವಲ್ ನಂತಹ ಪಾತ್ರಗಳನ್ನೂ ಮಾಡಲು ಸೂಕ್ತ ವ್ಯಕ್ತಿ ಎಂದು ಲೇವಡಿ ಮಾಡಿದ್ದಾನೆ.
ಅದೃಷ್ಟವಶಾತ್ ಅಜಿತ್ ದೋವಲ್ ಮನಮೋಹನ್ ಸಿಂಗ್ ಅವಧಿಯಲ್ಲಿ ಕಾರ್ಯನಿರ್ವಹಿಸಿರಲಿಲ್ಲ ಇಲ್ಲದಿದ್ದರೆ ಮನಮೋಹನ್ ಸಿಂಗ್ ಅವರನ್ನೂ ಸಿಖ್ ಭಯೋತ್ಪಾದಕ ಎಂದು ಬ್ರಾಂಡ್ ಮಾಡುತ್ತಿದ್ದರು ಎಂದು ಪತ್ರಕರ್ತ ಆರೋಪಿಸಿದ್ದಾನೆ.

SCROLL FOR NEXT