ಚೆನ್ನೈ: ನಿನ್ನೆ ರಾಮೇಶ್ವರಂನಲ್ಲಿ ಮಣ್ಣಲ್ಲಿ ಮಣ್ಣಾದ ಭಾರತ ರತ್ನ, ದೇಶ ಕಂಡ ಅಪ್ರತಿಮ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹೆಸರಲ್ಲಿ ಪ್ರಶಸ್ತಿಯೊಂದನ್ನು ನೀಡಲಾಗುವುದು ಮತ್ತು ಅವರ ಜನ್ಮದಿನವನ್ನು 'ಯುವ ನವೋದಯ ದಿನ'ವನ್ನಾಗಿ ಆಚರಿಸಲಿ ತಮಿಳುನಾಡು ಸರ್ಕಾರ ನಿರ್ಧರಿಸಿದೆ.
'ಡಾ.ಎಪಿಜೆ ಅಬ್ದುಲ್ ಕಲಾ ಪ್ರಶಸ್ತಿ' ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈ ಪ್ರಶಸ್ತಿಯನ್ನು ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯೊಂದು ವಿಜ್ಞಾನ, ಮಾನವ ಸಂಸ್ಕೃತಿ ಹಾಗೂ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ನೀಡಿ ಗೌರವಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ತಿಳಿಸಿದ್ದಾರೆ.
'ಈ ಮೂಲಕ ಬಲಿಷ್ಠ ಭಾರತ ಹಾಗೂ ಸಂಪನ್ಮೂಲ ತಮಿಳುನಾಡು' ನಿರ್ಮಾಣ ಮಾಡುವುದೇ ನಮ್ಮ ಸರ್ಕಾರದ ಉದ್ದೇಶ ಎಂದು ಜಯಲಲಿತಾ ಅವರು ಹೇಳಿದ್ದಾರೆ.
ಕಲಾಂ ಪ್ರಶಸ್ತಿ 8 ಗ್ರಾಂ ಬಂಗಾರದ ಪದಕ, ಐದು ಲಕ್ಷ ರುಪಾಯಿ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿ ರಾಜ್ಯದ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿದ್ದು, ಇದೇ ವರ್ಷದಿಂದ ನೀಡಲಾಗುವುದು ಎಂದು ತಮಿಳುನಾಡು ಸಿಎಂ ತಿಳಿಸಿದ್ದಾರೆ.
ಇನ್ನು ತಮಿಳುನಾಡು ಸರ್ಕಾರ ಕಲಾಂ ಜನ್ಮದಿನವಾದ ಅಕ್ಟೋಬರ್ 15ರಂದು 'ಯುವ ಜಾಗೃತಿ ದಿನ'ವನ್ನಾಗಿ ಆಚರಿಸಲಿದೆ ಎಂದು ಅವರು ಹೇಳಿದ್ದಾರೆ.