ಚೀನಾದ ಜಲಾಂತರ್ಗಾಮಿ ನೌಕೆ (ಸಂಗ್ರಹ ಚಿತ್ರ) 
ದೇಶ

ಚೀನಾದ ಅಣು ಜಲಾಂತರ್ಗಾಮಿ ಭೀತಿ: ನೌಕಾಪಡೆ ಹೈಅಲರ್ಟ್

ಹಿಂದೂ ಮಹಾಸಾಗರದಲ್ಲಿ ಚೀನಾದ ಅಣುಚಾಲಿತ ಜಲಾಂತರ್ಗಾಮಿಯೊಂದರ ಉಪಸ್ಥಿತಿ ಬಗ್ಗೆ ಸುಳಿವು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ಅಲರ್ಟ್ ಆಗಿದೆ...

ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಚೀನಾದ ಅಣುಚಾಲಿತ ಜಲಾಂತರ್ಗಾಮಿಯೊಂದರ ಉಪಸ್ಥಿತಿ ಬಗ್ಗೆ ಸುಳಿವು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ಅಲರ್ಟ್
ಆಗಿದೆ.

ಹೀಗೆಂದು ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ. ಸೊಮಾಲಿಯಾ ಸಮುದ್ರದಾಚೆ ಕಡಲ್ಗಳ್ಳರ ನಿಗ್ರಹಕ್ಕಾಗಿ ಸಬ್‍ಮರಿನ್ ಅನ್ನು ನಿಯೋಜಿಸಿರಬಹುದು ಎಂಬ ಊಹೆಯನ್ನು ತಳ್ಳಿಹಾಕಿರುವ ನೌಕಾಪಡೆ, ಈ ಬಗ್ಗೆ ಎಚ್ಚರಿಕೆ ವಹಿಸಿರುವುದಾಗಿ ತಿಳಿಸಿದೆ. ಕಳೆದ ಕೆಲ ತಿಂಗಳುಗಳಿಂದ ಚೀನಾದ ಸಬ್‍ಮರಿನ್‍ವೊಂದು ಹಿಂದೂ ಮಹಾಸಾಗರದಲ್ಲಿದೆ ಎಂಬ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಪತ್ತೆ ಮಾಡಿದಾಗ, ಭಾರತದ ಜಲಗಡಿಯ ಮೇಲೆ ಕಣ್ಣಿಡುತ್ತಿರುವ ಯಾವುದೇ ಸಬ್‍ಮರಿನ್ ಪತ್ತೆಯಾಗಿಲ್ಲ.

ಆದರೆ, ಶೀತಲ ಸಮರದ ಸಂದರ್ಭದಂತೆ ಈಗಲೂ ಯಾವುದೋ ದೊಡ್ಡ ಜಲಾಂತರ್ಗಾಮಿ ಕುತಂತ್ರ ನಡೆಯುತ್ತಿದೆ ಎಂಬ ಅನುಮಾನವಿದೆ. ಈ ಹೊಸ ಸಬ್‍ಮರಿನ್ ಕಪಟ ಆಟದಲ್ಲಿ
ಚೀನಾದ ಹೊಸ ವಿಧದ 093 ಶಾಂಗ್ ದರ್ಜೆಯ ತ್ವರಿತ ದಾಳಿಯ ಅಣು ಸಬ್ ಮರಿನ್ ಪ್ರಮುಖ ಪಾತ್ರ ವಹಿಸಿರಬಹುದು. ಇಂತಹ ಕನಿಷ್ಠ 6 ಸಬ್‍ಮರಿನ್‍ಗಳನ್ನು ಚೀನಾ ಅಭಿವೃದ್ಧಿಪಡಿಸಿರಬಹುದು ಅಥವಾ ನಿಯೋಜಿಸಿರಲೂಬಹುದು ಎಂದೂ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!