ಕ್ಲೀನ್ ಮೈ ಕೋಚ್ ರೈಲ್ವೆಯ ಸ್ವಚ್ಛ ಅಭಿಯಾನ (ಸಾಂದರ್ಭಿಕ ಚಿತ್ರ) 
ದೇಶ

ಕ್ಲೀನ್ ಮೈ ಕೋಚ್ ರೈಲ್ವೆಯ ಸ್ವಚ್ಛ ಅಭಿಯಾನ

ಇನ್ನು ಮುಂದೆ ರೈಲು ಪ್ರಯಾಣಿಕರು ಮೂಗುಮುಚ್ಚಿಕೊಂಡು ಪ್ರಯಾಣ ಮಾಡಬೇಕಿಲ್ಲ. ಕಣ್ಣೆದುರಿಗಿನ ಗಲೀಜನ್ನು ಸಹಿಸಿಕೊಂಡು ಅಸಹಾಯಕರಾಗಿ ಕೂರಬೇಕಿಲ್ಲ...

ನವದೆಹಲಿ: ಇನ್ನು ಮುಂದೆ ರೈಲು ಪ್ರಯಾಣಿಕರು ಮೂಗುಮುಚ್ಚಿಕೊಂಡು ಪ್ರಯಾಣ ಮಾಡಬೇಕಿಲ್ಲ. ಕಣ್ಣೆದುರಿಗಿನ ಗಲೀಜನ್ನು ಸಹಿಸಿಕೊಂಡು ಅಸಹಾಯಕರಾಗಿ ಕೂರಬೇಕಿಲ್ಲ. ಸ್ವಚ್ಛಭಾರತ ಅಭಿಯಾನ ರೈಲ್ವೆ ಇಲಾಖೆಗೂ ಪಸರಿಸಲಿದ್ದು, ಕೇವಲ ಒಂದು ಮೊಬೈಲ್ ಕ್ಲಿಕ್‍ನಿಂದಾಗಿ ನಿಮ್ಮ ದೂರಪ್ರಯಾಣದ ಅನುಭವ ಹಿತಕರವಾಗಿಸಿಕೊಳ್ಳಬಹುದು.

ಭಾರತೀಯ ರೈಲ್ವೆ `ಕ್ಲೀನ್ ಮೈ ಕೋಚ್' ಎಂಬ ಹೊಸ ಆ್ಯಪ್ ಬಿಡುಗಡೆ ಮಾಡಲಿದ್ದು, ಬೋಗಿಯೋಳಗೆ ಶುಚಿತ್ವದ ಸಮಸ್ಯೆ ಇದ್ದರೆ ನಿಮಿಷಾರ್ಧದಲ್ಲಿ ಆನ್ ಲೈನ್ ಮೂಲಕವೇ ದೂರು ಸಲ್ಲಿಸ ಬಹುದಾಗಿದೆ. ದೂರು ಸಲ್ಲಿಸಿದ 15 ನಿಮಿಷಗಳೊಳಗಾಗಿ ಸಿಬ್ಬಂದಿ ಬಂದು ಬೋಗಿಯನ್ನು ಸ್ವಚ್ಛಗೊಳಿಸಲಿದ್ದಾರೆ.

ಸದ್ಯಕ್ಕೆ ಈ ಆ್ಯಪ್ ಇನ್ನೂ ಪರೀಕ್ಷೆ ಹಂತದಲ್ಲಿದ್ದು, ಕೇಂದ್ರ ರೈಲ್ವೆಯಲ್ಲಿ ಸಾಧಕ ಬಾಧಕಗಳ ತಪಾಸಣೆ ನಡೆಯುತ್ತಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಮಾಡಿದ ಹಲವು ಸುಧಾರಣೆಗಳಲ್ಲಿ ಮೊಬೈಲ್ ಆ್ಯಪ್ ಸೌಲಭ್ಯ ಹೊಸ ಹೆಜ್ಜೆಯಾಗಿದೆ, ಈಗಾಗಲೇ ರೈಲ್ವೆ ಮಂಡಳಿಯಲ್ಲಿ ಸ್ವಚ್ಛತಾ ವಿಭಾಗವೊಂದನ್ನು ಆಯೋಜಿಸಿದ್ದು, ರೈಲುಗಳನ್ನು ಮಾತ್ರವಲ್ಲದೆ ಎ,ಬಿ,ಸಿ ದರ್ಜೆಯ ನಿಲ್ದಾಣಗಳನ್ನೂ ಶುಚಿಯಾಗಿಡುವಂತೆ ಆ ವಿಭಾಗಕ್ಕೆ ನಿರ್ದೇಶಿಸಲಾಗಿದೆ.

ದೂರು ಸಲ್ಲಿಕೆ ಹೇಗೆ?

ಕಂಪ್ಲೇಂಟ್ ಬಾಕ್ ನಲ್ಲಿ ನಿಮ್ಮ ಕೋಚ್‍ಗೆ ಸಂಬಂಧಿಸಿದ ಪಿಎನ್‍ಆರ್ ನಂಬರ್ ಟೈಪ್ ಮಾಡಿ ತಕ್ಷಣ ಹೌಸ್ ಕೀಪಿಂಗ್ ವಿಭಾಗದವರಿಗೆ ಬರ್ತ್ ಮತ್ತು ಕೋಚ್‍ನ ನಂಬರ್ ವಿವರವಿರುವ ಎಸ್ಸೆಮ್ಮೆಸ್ ತಲುಪುತ್ತದೆ. ಶುಚಿಕಾರ್ಯ ಮುಗಿದ ನಂತರ ದೂರುಕೊಟ್ಟವರು ರಸೀದಿಗೆ ಸಹಿ ಹಾಕಿ ಹೌಸ್ ಕೀಪಿಂಗ್ ವಿಭಾಗದವರಿಗೆ ನೀಡಬೇಕಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!