ಸಾಂದರ್ಭಿಕ ಚಿತ್ರ 
ದೇಶ

ರೇಪ್ ಸಂತ್ರಸ್ತೆಯರ ಟೂ ಫಿಂಗರ್ಸ್ ಟೆಸ್ಟ್: ಸುತ್ತೋಲೆ ವಾಪಸ್ ಪಡೆದ ದೆಹಲಿ ಸರ್ಕಾರ

ಅತ್ಯಾಚಾರ ಸಂತ್ರಸ್ತೆಯರ ಪರೀಕ್ಷೆ ಸಂದರ್ಭದಲ್ಲಿ ಬಳಸುತ್ತಿದ್ದ "ಟೂ ಫಿಂಗರ್ ಟೆಸ್ಟ್" ವಿವಾದಾತ್ಮಕ ಸುತ್ತೋಲೆಯನ್ನು ದೆಹಲಿ ಸರ್ಕಾರ ಹಿಂಪಡೆದಿದೆ

ನವದೆಹಲಿ:ಅತ್ಯಾಚಾರ ಸಂತ್ರಸ್ತೆಯರ ಪರೀಕ್ಷೆ ಸಂದರ್ಭದಲ್ಲಿ ಬಳಸುತ್ತಿದ್ದ "ಟೂ ಫಿಂಗರ್ ಟೆಸ್ಟ್" ವಿವಾದಾತ್ಮಕ ಸುತ್ತೋಲೆಯನ್ನು ದೆಹಲಿ ಸರ್ಕಾರ ಹಿಂಪಡೆದಿದೆ

ಈ ಪರೀಕ್ಷಾ ವಿಧಾನವನ್ನು ಹಲವು ವರ್ಷಗಳಿಂದ ಮಹಿಳಾ ಹಕ್ಕು ಹೋರಾಟಗಾರರು ವಿರೋಧಿಸುತ್ತಾ ಬಂದಿದ್ದರು. ಈ ಪರೀಕ್ಷಾ ವಿಧಾನ ಮಹಿಳೆಯರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತೆ ಎಂದು 2013 ರಲ್ಲಿ ಸುಪ್ರಿಂಕೋರ್ಟ್ ಹೇಳಿತ್ತು. ಜೊತೆಗೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಇದಕ್ಕಿಂತ ಉತ್ತಮವಾದ ಬೇರೆ ವಿಧಾನವನ್ನು ಅಳವಡಿಸುವಂತೆ ಸುಪ್ರೀಂ ಸೂಚಿಸಿತ್ತು.

ಆದರೆ ಮೇ 31 ರಂದು ಈ ಸುತ್ತೋಲೆಯನ್ನು ಹೊರಡಿಸಿದ್ದು, ಕೆಲವೊಂದು ಸಂದರ್ಭಗಳಲ್ಲಿ ಈ ವಿಧಾನ ಅನುಸರಿಸುವುದು ಅನಿವಾರ್ಯ.ಇದರಲ್ಲಿ ಮಹಿಳೆಯರನ್ನು ಸಂದಿಗ್ಧ ಪರಿಸ್ಥಿತಿಗೆ ಈಡು ಮಾಡುವ ಉದ್ದೇಶವಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಿತ್ತು.

ಸಂತ್ರಸ್ತೆಗೆ ಅನ್ಯಾಯ ತಪ್ಪಿಸಲು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಈ ಮಾದರಿಯ ಪರೀಕ್ಷೆ ಅಗತ್ಯವಿದೆ ಎಂದು ಸರ್ಕಾರ ಹೊರಡಿಸಿದ್ದ ಸುತ್ತೊಲೆಯಲ್ಲಿ ತಿಳಿಸಲಾಗಿತ್ತು. ಜೊತೆಗೆ ಈ ವಿಧಾನದ ಪರೀಕ್ಷೆ ಮಾಡುವ ಸಂದರ್ಭದಲ್ಲಿ ಸಂತ್ರಸ್ತೆಗೆ ಮಾಹಿತಿ ನೀಡಿ ಅವರಿಂದ ಒಪ್ಪಿಗೆ ಪಜಡದ ನಂತರವಷ್ಟೇ ಈ ರೀತಿಯ ಪರೀಕ್ಷೆಗೆ ಅವಕಾಶ ಎಂದು ಉಲ್ಲೇಖಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!