ಚೆನ್ನೈ: ಚೆನ್ನೈ ಕರಾವಳಿಯ ಸಮುದ್ರದಲ್ಲಿ ಕಳೆದ ಜೂನ್ 8ರಂದು ನಾಪತ್ತೆಯಾಗಿದ್ದ ಕರಾವಳಿ ಕಾವಲು ಪಡೆಯ ಡೋರ್ನಿಯರ್ ವಿಮಾನದ ಸಹ ಪೈಲಟ್‌ನ ಪತ್ನಿ ದೀಪಾ ಸುಭಾಶ್ ಅವರು, ಪತಿಯನ್ನು ಹುಡುಕಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಇದೇ ವೇಳೆ ನಾಪತ್ತೆ ವಿಮಾನ ಪತ್ತೆ ಕಾರ್ಯಾಚರಣೆಯತ್ತ ವಿಶೇಷ ಗಮನ ಕೊಡುವಂತೆ ಮತ್ತು ಕಾಣೆಯಾಗಿರುವ ತನ್ನ ಪತಿಯನ್ನು ಹುಡುಕಿ ಕೊಡುವಂತೆ ಹೇಳಿದ್ದಾರೆ.
ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿರುವ ಡೋರ್ನಿಯರ್ ವಿಮಾನದ ಸಹ ಪೈಲಟ್ ಆಗಿರುವ ನನ್ನ ಪತಿ ಸುಭಾಶ್ ಸುರೇಶ್ ಅವರು ಕಾಣೆಯಾಗಿದ್ದಾರೆ. ಅವರನ್ನು ಹುಡುಕಾಡುವ ವಿಷಯದಲ್ಲಿ ದಯವಿಟ್ಟು ಹೆಚ್ಚಿನ ಗಮನ ಕೊಡಿ' ಎಂದು ದೀಪಾ ಸುಭಾಶ್ ಟ್ವಿಟರ್ ಸಂದೇಶದ ಮೂಲಕ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಸೋಮವಾರವಷ್ಟೇ ಟ್ವಿಟರ್ ಖಾತೆ ಆರಂಭಿಸಿದ ದೀಪಾ ಅವರು "ಫೈಂಡ್ ಸುಭಾಶ್' ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.