ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮತ್ತು ಪ್ರಧಾನಿ ನರೇಂದ್ರ ಮೋದಿ 
ದೇಶ

ಮೌನ ಮರಿದು ಲಲಿತ್ ಮೋದಿ ಪ್ರಕರಣದ ಬಗ್ಗೆ ಪ್ರಧಾನಿ ಪ್ರತಿಕ್ರಿಯಿಸಲಿ: ಕಾಂಗ್ರೆಸ್

ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಲಲಿತ್ ಮೋದಿ ಪ್ರಕರಣ ಸಂಬಂಧ ಇಲ್ಲಿಯವರೆಗೂ ಮೌನವಾಗಿರುವ ಪ್ರಧಾನಿ ಮೋದಿ,....

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಲಲಿತ್ ಮೋದಿ ಪ್ರಕರಣ ಸಂಬಂಧ ಇಲ್ಲಿಯವರೆಗೂ ಮೌನವಾಗಿರುವ ಪ್ರಧಾನಿ ಮೋದಿ, ತಮ್ಮ ಧ್ಯಾನದಿಂದ ಹೊರಬಂದು ಮಾತನಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಎಲ್ಲಾ ಮಂತ್ರಿಗಳು ತಂತ್ರಿಗಳಾಗುತ್ತಿದ್ದಾರೆ. ಯಾವ ಸಚಿವ ಎಲ್ಲಿಗೆ ಹೋಗುತ್ತಾರೆ...ಎಲ್ಲಿಂದ ಬರುತ್ತಾರೆ...ಏನು ತಿನ್ನುತ್ತಾರೆ ಎಂಬುದರ ಇಂಚಿಂಚು ಮಾಹಿತಿ ನರೇಂದ್ರ  ಮೋದಿಗೆ ತಿಳಿದಿದೆ. ಎಲ್ಲವನ್ನೂ ಅರಿತಿರುವ ಮೋದಿ ರಾಜಕೀಯ ವಿಪಶನದಿಂದ ಹೊರಬಂದು. ಲಲಿತ್ ಗೇಟ್ ಪ್ರಕರಣದ ಬಗ್ಗೆ ದೇಶದ ಜನತೆಗೆ ಸತ್ಯವನ್ನು ಹೇಳಬೇಕು ಎಂದು ಕಾಂಗ್ರೆಸ್  ವಕ್ತಾರ ಟಾಮ್ ವಡಕ್ಕನ್ ಆಗ್ರಹಿಸಿದ್ದಾರೆ.

ರಾಜಸ್ತಾನ ಮುಖ್ಯಮಂತ್ರಿ ವಸುಂದರಾರಾಜೇ ಮಗ ದುಶ್ಯಂತ್ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದ್ದರು ಎಂದು ಹೇಳಿದ ವಡಕ್ಕನ್ ಇದರ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಯಾವ ಮೋದಿಗೆ ಯಾರ ಜೊತೆ ಸಂಬಂಧ ಇದೆ ಎಂದು ತಿಳಿಯುವುದು ಬಹಳ ಕಷ್ಟ. ಹೀಗಾಗಿ ಇಡಿ ಪ್ರಕರಣದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು ಸಾಧಿಸಿದು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ