ಮುಂಬೈ: ಜಿಂದಾಲ್ ಕಾಮಾಕ್ಷಿ ಸರಕು ಸಾಗಣೆ ಹಡಗು ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಹಡಗಿನಲ್ಲಿದ್ದ 20 ಮಂದಿ ಸಿಬ್ಬಂದಿಯನ್ನು ಭಾರತೀಯ ನೌಕಾಸೇನೆ ರಕ್ಷಿಸಿದೆ.
ಜಿಂದಾಲ್ ಕಾಮಾಕ್ಷಿ ಕಂಪನಿಗೆ ಸೇರಿದ ಸರಕು ತುಂಬಿದ್ದ ಹಡಗು ವಾಸಾಯಿ ಕರಾವಳಿಯಿಂದ ಕೊಚ್ಚೀನ್ ಮುಂದ್ರಾ ಬಂದರಿಗೆ ತೆರಳುತ್ತಿತ್ತು. ಮುಂಬೈನಿಂದ 40 ನಾಟಿಕಲ್ ಮೈಲಿ ದೂರದಲ್ಲಿದ್ದ ಹಡಗು ಮಧ್ಯ ರಾತ್ರಿ ಐಎನ್ಎಸ್ ಮುಂಬೈ ನೌಕಾನೆಲೆಗೆ ಅಪಾಯದ ಸಂದೇಶ ರವಾನಿಸಿತ್ತು. ಈ ಹಿನ್ನಲೆಯಲ್ಲಿ ಕಾರ್ಯ ಪೌರುತ್ತರಾದ ಭಾರತೀಯ ನೌಕಾಸೇನೆ ಸಿಬ್ಬಂದಿ 19 ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರಕು ಸಾಗಣೆ ಹಡಗಿನಲ್ಲಿ 20 ಸಿಬ್ಬಂದಿ ಪ್ರಯಾಣಿಸುತ್ತಿದ್ದು, ಎಲ್ಲಾ 20 ಸಿಬ್ಬಂದಿಯನ್ನು ಸೀ ಕಿಂಗ್ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಸದ್ಯ ಹಡಗು ಮುಳುಗಡೆಗೆ ಕಾರಣಗಳೆನೆಂಬುದು ತಿಳಿದುಬಂದಿಲ್ಲ. ನೌಕಾಸೇನೆ ಸಿಬ್ಬಂದಿ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ.