ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸೇನಾಪಡೆಗಳಿಗೆ ಯೋಗ ಕಡ್ಡಾಯಗೊಳಿಸಿದ ಕೇಂದ್ರ

ತಮ್ಮ ದೈನಂದಿನ ವ್ಯಾಯಾಮದಲ್ಲಿ ಯೋಗವನ್ನು ಸೇರ್ಪಡೆಗೊಳಿಸುವಂತೆ 10 ಲಕ್ಷ ಅರೆಸೇನಾ ಪಡೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ...

ಸಂಗ್ರಹ ಚಿತ್ರ
Mainashree
Updated On : 29 Jun 2015, 7:19 am

ನವದೆಹಲಿ: ತಮ್ಮ ದೈನಂದಿನ ವ್ಯಾಯಾಮದಲ್ಲಿ ಯೋಗವನ್ನು ಸೇರ್ಪಡೆಗೊಳಿಸುವಂತೆ 10 ಲಕ್ಷ ಅರೆಸೇನಾಪಡೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ದೇಶದ ಅರೆಸೇನಾ ಪಡೆ ಸೇರಿದಂತೆ ಅನೇಕ ಪೊಲೀಸ್ ದಳಗಳಿಗೆ ದಿನನಿತ್ಯದ ವ್ಯಾಯಾಮದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶಿಸಿದೆ.

ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ದಳ ಮತ್ತು ಬಟಾಲಿಯನ್ಸ್, ಗಡಿ ಭಾಗದ ಅಸ್ಸಾಂ ರೈಫಲ್ ಅಧಿಕಾರಿಗಳಿಗೆ ದೈನಂದಿನ ಚಟುವಟಿಕೆಯಲ್ಲಿ ದೈಹಿಕ ವ್ಯಾಯಾಮವು ಒಂದು ಭಾಗವಾಗಿದೆ. ಅಲ್ಲದೇ, ಯೋಗಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಈ ಎರಡನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಗವನ್ನು ಕೂಡ ಈ ದೈನಂದಿನ ಚಟುವಟಿಕೆಯ ಭಾಗವಾಗಬೇಕು ಎಂಬ ಆದೇಶವನ್ನು ಕೇಂದ್ರ ಹೊರಡಿಸಿದೆ.

ಈಗಾಗಲೇ ಆರು ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆಗಳಾದ ಕೇಂದ್ರ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ದಳ, ಶಸ್ತ್ರಾಸ್ತ್ರ ಸೀಮಾ ಬಲ್, ರಾಷ್ಟ್ರೀಯ ಭದ್ರತಾ ದಳ ಮತ್ತು ಅಸ್ಸಾಂ ರೈಫಲ್ ಪಡೆಗಳಿಗೆ ಯೋಗಾವನ್ನು ಕಡ್ಡಾಯವಾಗಿ ಮಾಡಬೇಕು ಆದೇಶ ಪತ್ರ ನೀಡಿದೆ.

ಯೋಗಾ ಭಾರತದ ಸಾಂಪ್ರಾದಾಯಿಕ ಕೊಡುಗೆ. ಇದನ್ನು ಬೆಳೆಸುವುದು ನಮ್ಮ ಕರ್ತವ್ಯವಾಗಿದ್ದು, ಇದನ್ನು ಪ್ರತಿಯೊಬ್ಬ ನಾಗರಿಕನು ತಮ್ಮ ದೈನಂದಿನ ವ್ಯಾಯಾಮದಲ್ಲಿ ಅಳವಡಿಸಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ಯೋಧನು ಇದನ್ನು ಕಡ್ಡಾಯವಾಗಿ ಮಾಡುವುದರ ಮೂಲಕ ಇತರ ನಾಗರಿಕರಿಗೆ ಮಾದರಿಯಾಗಿರಬೇಕು ಎಂದು ಆದೇಶ ಪತ್ರದಲ್ಲಿ ಬಿತ್ತರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments