ಸಂಗ್ರಹ ಚಿತ್ರ 
ದೇಶ

ಇನ್ನು ಮುಂದೆ ಎಲ್ಲೆಂದರಲ್ಲಿ ಕಾಂಡೋಮ್, ನ್ಯಾಪ್ಕಿನ್ ಎಸೆಯುವಂತಿಲ್ಲ!

ಇನ್ನು ಮುಂದೆ ನಾಗರಿಕರು ಎಲ್ಲೆಂದರಲ್ಲಿ ನ್ಯಾಪ್ಕಿನ್, ಕಾಂಡೋಮ್ ಮತ್ತು ಟ್ಯಾಂಪರ್ಸ್ ಗಳನ್ನು ಎಸೆಯುವಂತಿಲ್ಲ. ಏಕೆಂದರೆ ತ್ಯಾಜ್ಯ ವಿಲೇವಾರಿಯಲ್ಲಿ...

ನವದೆಹಲಿ: ಇನ್ನು ಮುಂದೆ ನಾಗರಿಕರು ಎಲ್ಲೆಂದರಲ್ಲಿ ನ್ಯಾಪ್ಕಿನ್, ಕಾಂಡೋಮ್ ಮತ್ತು ಟ್ಯಾಂಪರ್ಸ್ ಗಳನ್ನು ಎಸೆಯುವಂತಿಲ್ಲ. ಏಕೆಂದರೆ ತ್ಯಾಜ್ಯ ವಿಲೇವಾರಿಯಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದ್ದು, ಇದರಲ್ಲಿ 'ಸ್ಯಾನಿಟರಿ ವೇಸ್ಟ್' ಬಗ್ಗೆ ಪ್ರತ್ಯೇಕವಾಗಿ ವ್ಯಾಖ್ಯಾನಿಸಲಾಗಿದೆ.

ಹೊಸ ನಿಯಮದಲ್ಲಿ ಡೈಪರ್ಸ್, ನ್ಯಾಪ್ಕಿನ್ಸ್, ಟ್ಯಾಂಪರ್ಸ್, ಸ್ಯಾನಿಟರಿ ಟವೆಲ್ಸ್ ಮತ್ತು ಕಾಂಡೋಮ್‌ಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆ ವಿವರಿಸಲಾಗಿದೆ. 'ತ್ಯಾಜ್ಯ ಉತ್ಪಾದಕರ ಕರ್ತವ್ಯಗಳು' ಎಂಬ ಸೆಕ್ಷನ್ ಅಡಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿಲಾಗಿದೆ.

ನಾಗರಿಕರು 'ಸ್ಯಾನಿಟರಿ ವೇಸ್ಟ್‌ಗಳನ್ನು ಬಳಸಿದ ಕೂಡಲೇ ದಿನಪತ್ರಿಕೆ ಅಥವಾ ಇತರೆ ಜೈವಿಕವಾಗಿ ಕರಗುವಂಥ ಉತ್ಪನ್ನಗಳಲ್ಲಿ ಸುತ್ತಿ, ಒಣ ತ್ಯಾಜ್ಯಗಳನ್ನು ಇರಿಸುವಂತಹ ಪ್ರತ್ಯೇಕ ಕಸದ ಬುಟ್ಟಿಯಲ್ಲಿ ಹಾಕಬೇಕು' ಎಂದು ಹೊಸ ನಿಯಮದಲ್ಲಿ ವಿವರಿಸಲಾಗಿದೆ.

ಒಣ ತ್ಯಾಜ್ಯಗಳನ್ನು ರಸ್ತೆ, ಖಾಲಿ ಜಾಗ, ಚರಂಡಿ ಅಥವಾ ನೀರು ಇರುವ ಜಾಗದಲ್ಲಿ ಎಸೆಯುವಂತಿಲ್ಲ ಎಂದು ಒಣ ತ್ಯಾಜ್ಯ ವಿಲೇವಾರಿ ಕಾನೂನಿನಲ್ಲಿ ಹೇಳಲಾಗಿದೆ.
ಎಲ್ಲಾ ರೀತಿಯ ಕಸ ವಿಲೇವಾರಿಯ ಜವಾಬ್ದಾರಿಯನ್ನೂ ನಗರಾಡಳಿತಕ್ಕೆ ವಹಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಕಾರ್ಯಕ್ರಮಗಳನ್ನು ಹಾಗೂ ನಿಯಮಗಳನ್ನು ಮಾಡಿಕೊಳ್ಳಬಹುದಾಗಿದೆ. ಆದರೆ, ಇನ್ನು ಮುಂದೆ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಮನ ಬಂದಂತೆ ಎಸೆಯುವಂತಹ ಸ್ಯಾನಿಟರಿ ಕಡಿವಾಣ ಹಾಕಲೇಬೇಕು ಎಂದು ಹೊಸ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

Ganesh Chaturthi ಎಫೆಕ್ಟ್; ಮತ್ತೆ ಗಗನದತ್ತ ಮುಖ ಮಾಡಿದ ಚಿನ್ನದ ಬೆಲೆ, ಇಂದಿನ ದರ ಪಟ್ಟಿ ಇಂತಿದೆ!

ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ ಮಹಿಳೆಯರಿಗೆ ಸುರಕ್ಷಿತ ನಗರ; ಪಾಟ್ನಾ, ಜೈಪುರ ಅಸುರಕ್ಷಿತ!

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

SCROLL FOR NEXT