ದೇಶ

ಚೌಟಾಲ ಹಾಗೂ ಪುತ್ರನಿಗೆ 10 ವರ್ಷ ಜೈಲು ಶಿಕ್ಷೆ: ತೀರ್ಪು ಎತ್ತಿ ಹಿಡಿದ ದೆಹಲಿ ಹೈಕೋರ್ಟ್

Lingaraj Badiger

ನವದೆಹಲಿ: ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ಹಾಗೂ ಪುತ್ರ ಅಜಯ್ ಚೌಟಾಲಗೆ ಸಿಬಿಐ ವಿಶೇಷ ಕೋರ್ಟ್ ವಿಧಿಸಿದ್ದ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಗುರುವಾರ ಎತ್ತಿ ಹಿಡಿದಿದೆ.

ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಶ್ನಿಸಿ ಚೌಟಾಲ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಅವರು, ಚೌಟಾಲ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಈ ಹಗರಣ ನಡೆದಿರುವುದರಿಂದ ಅವರೇ ಹೆಚ್ಚು ಹೊಣೆಗಾರರು ಎಂದು ಹೇಳಿದ್ದಾರೆ.

2000ನೇ ಇಸವಿಯಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಚೌಟಾಲ ಹಾಗೂ ಅವರ ಪುತ್ರ ಅಜಯ್ ಚೌಟಾಲ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಜನವರಿ 22ರಂದು ತೀರ್ಪು ನೀಡಿತ್ತು.

SCROLL FOR NEXT