ದೇಶ

ಕಾಪ್ಟರ್ ದುರ್ಘಟನೆ: 10 ಮಂದಿ ಸಾವು

Srinivasamurthy VN

ಬ್ಯುನಸ್ ಐರೀಸ್: ಫ್ರಾನ್ಸ್ ನ ಇಬ್ಬರು ಒಲಿಂಪಿಕ್ ಪದಕ ವಿಜೇತರೂ ಸೇರಿದಂತೆ ಒಟ್ಟು ಹತ್ತು ಮಂದಿ ಹೆಲಿಕಾಪ್ಟರ್ ದುರಂತದಲ್ಲಿ ಮೃತರಾಗಿದ್ದಾರೆ.

ಅರ್ಜೆಂಟೀನಾದಲ್ಲಿ ರಿಯಾಲಿಟಿ ಶೋ ಒಂದನ್ನು ಚಿತ್ರೀಕರಿಸಲು ಫ್ರೆಂಚ್ ಕ್ರೀಡಾಳುಗಳನ್ನು ಹೊತ್ತೊಯ್ಯುತ್ತಿದ್ದ ಎರಡು ಹೆಲಿಕಾಪ್ಟರ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.

ಬ್ಯುನಸ್ ಐರೀಸ್‍ನ ನೈಋತ್ಯ ಭಾಗದಿಂದ 730 ಕಿ.ಮೀ. ದೂರದ ಲಾ ರಿಯೋಜ ಪ್ರಾಂತ್ಯ ಸಮೀಪದ ವಿಲ್ಲಾ ಕಾಸ್ಟೆಲಿ ಸ್ಫೋಟ ಸಂಭವಿಸಿದೆ ಎಂದು ಸುರಕ್ಷತಾ ವ್ಯವಸ್ಥೆ ಕಾರ್ಯದರ್ಶಿ ಸಿಸರ್ ಆಂಗೌಲೊ ತಿಳಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲೆಂಡ್ ಈ ಬಗ್ಗೆ ವಿಷಾದ ವ್ಯಕ್ತಪಡಿಸಿ, ಈ ದುರ್ಘಟನೆ ಹೆಚ್ಚಿನ ನೋವನ್ನು ತಂದಿದೆ ಎಂದು ತಿಳಿಸಿದ್ದಾರೆ. ಒಲಿಂಪಿಕ್ ಈಜಿನಲ್ಲಿ ಮಫ್ಫಟ್(25), ವಾಸ್ಟಿನ್(28), ಲಘು ಮುಷ್ಟಿಕಾಳಗದಲ್ಲಿ ಪದಕ ಗಳಿಸಿದ್ದರು.

SCROLL FOR NEXT