ಹರಿಯಾಣ: ಹರಿಯಾಣದ ಅಮೃತಸರ, ಲುಧಿಯಾನ, ಪಟಿಯಾಲ, ರೋಪರ್, ಮೊಹಾಲಿ, ಪಗ್ವಾರಾ ಮತ್ತು ನವಾನ್ಶಹರ್ ಸೇರಿದಂತೆ ಹಲವು ಪ್ರದೇಶಗಲ್ಲಿ ಅಕಾಲಿಕ ಮಳೆ ಹಾಗೂ ಹಿಮಪಾತವಾಗಿದ್ದು, ಸುಮಾರು 4 ಲಕ್ಷ ಹೆಕ್ಟೆರ್ ಗೂ ಅಧಿಕ ಪ್ರಮಾಣದ ಬೆಳೆನಾಶವಾಗಿದೆ ಎಂದು ತಿಳಿದು ಬಂದಿದೆ.
ಅಕಾಲಿಕ ಮಳೆಯಿಂದಾಗಿ ರೈತರ ಲಕ್ಷಾಂತರ ರುಪಾಯಿ ಬೆಳೆಗಳು ನಾಶಗೊಂಡಿವೆ. ಕೃಷಿಯನ್ನೇ ಜೀವನದ ಮೂಲವಾಗಿಸಿಕೊಂಡಿದ್ದ ಸ್ಥಳೀಯ ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಈಗಾಗಲೇ ನಾಲ್ವರು ರೈತರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂತ್ರಸ್ಥ ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿದ್ದು, ರೈತರಿಗೆ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯ. ಕೂಡಲೇ ಸಮಯಕ್ಕೆ ಸರಿಯಾಗಿ ರೈತರಿಗೆ ಪರಿಹಾರ ಧನವನ್ನು ಸರ್ಕಾರ ನೀಡಬೇಕು. ಈ ಕುರಿತಂತೆ ಲೋಕಸಭೆಯಲ್ಲಿ ಚರ್ಚೆ ನಡೆಸುವಂತೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಅಕಾಲಿಕ ಮಳೆಯಿಂದ ರೈತರಿಗಾದ ನಷ್ಟಕ್ಕೆ ಈಗಾಲೇ ಕ್ರಮ ಕೈಗೊಂಡಿರುವ ಹರಿಯಾಣ ಸರ್ಕಾರ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು, ಬೆಳೆಹಾನಿ ಹಾಗೂ ರೈತರಿಗಾದ ನಷ್ಟ ಕುರಿತಂತೆ ಸ್ಥಳೀಯ ಅಧಿಕಾರಿಗಳು ಕೂಡಲೇ ಸರ್ವೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.