ನೈಜೀರಿಯಾ: ಬೋಕೋ ಹರಮ್ ಉಗ್ರರು ಅಪಹರಿಸಿದ್ದ 300ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳನ್ನು ನೈಜೀರಿಯಾದ ಸೇನಾ ಪಡೆಗಳು ಸುರಕ್ಷಿತವಾಗಿ ಕರೆತಂದಿದೆ.
ಏ.8 ರಂದು ಆಫ್ರಿಕನ್ ನಾಯಕರು ಬೊಕೊಹರಮ್ ಸಮಾವೇಶ ನಡೆಸಿದ ನಂತರ ನೈಜೀರಿಯಾ ಸೇನಾ ಪಡೆ ಸಂಬಿಸಾ ಅರಣ್ಯ ಪ್ರದೇಶದಲ್ಲಿ ಸುತ್ತಾಟ ನಡೆಸಿದೆ. ಈ ವೇಳೆ ಉಗ್ರರು ತಮ್ಮ ಕೇಂದ್ರ ಬಿಂದುವಾಗಿರಿಸಿಕೊಂಡಿರುವ ಗ್ವೋಜ ಪ್ರದೇಶದ ಮೇಲೆ ದಾಳಿ ಮಾಡಿದ ಸೇನಾ ಪಡೆಯು ಅಲ್ಲಿದ್ದ 10 ಮಂದಿ ಉಗ್ರರನ್ನು ಹತ್ಯೆಗೈದಿದ್ದಾರೆ. ನಂತರ ಉಗ್ರರ ಬಂಧನದಲ್ಲಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಉಗ್ರರ ವಶದಲ್ಲಿದ್ದ ಹಲವರು ಅನ್ನ ಆಹಾರ ಸಿಗದೆ ಅನಾರೋಗ್ಯದಿಂದ ಬಳಲುತ್ತಿದ್ದು, ಅಪಹರಣಕ್ಕೊಳಗಾದ 700 ಮಂದಿ ಮಹಿಳೆ ಮತ್ತು ಮಕ್ಕಳೆಲ್ಲರೂ ಸುರಕ್ಷಿತವಾಗಿದ್ದಾರೆಂದು ಸೇನಾ ಪಡೆ ತಿಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.