ನವದೆಹಲಿ: ಮಾ.7ರಂದು ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಆತನಿಗೆ ಪಾಕಿಸ್ತಾನದಿಂದ ಕರೆಗಳ ಮಹಾಪೂರವೇ ಹರಿದುಬಂದಿತ್ತಂತೆ.
ಮಸಾರತ್ ಆಲಂ ಅಂದು ಪಾಕ್‍ನಿಂದ ಬಂದ 50 ಕರೆಗಳನ್ನು ಸ್ವೀಕರಿಸಿದ್ದು, ಇವುಗಳನ್ನು ಮಾಡಿದವರು ಲಷ್ಕರ್ -ಎ-ತೊಯ್ಬಾ ಉಗ್ರರು ಎಂದು ಭದ್ರತಾ ಸಂಸ್ಥೆಗಳು ಮಾಹಿತಿ ನೀಡಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಈ ಬಗ್ಗೆ ವರದಿ ನೀಡಿರುವ ಭದ್ರತಾ ಸಂಸ್ಥೆಗಳು, ಕಾಶ್ಮೀರ ಕಣಿವೆಯಲ್ಲಿ ಅಶಾಂತಿ ಸೃಷ್ಟಿಸುವುದೇ ಉಗ್ರರ ಉದ್ದೇಶವಾಗಿತ್ತು ಎಂದಿವೆ.
ಇತ್ತೀಚೆಗಷ್ಟೇ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಾ ಗಿಲಾನಿ ನೇತೃತ್ವದಲ್ಲಿ ಕಾಶ್ಮೀರದಲ್ಲಿ ನಡೆದ ರ್ಯಾಲಿಯಲ್ಲಿ ಮಸರತ್ ಆಲಂ ಕೂಡ ಪಾಲ್ಗೊಂಡಿದ್ದು, ಇದೇ ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ಧ್ವಜ ಹಾರಿಸಿದ ಘಟನೆ ನಡೆದಿತ್ತು.