ಆಧಾರ್ 
ದೇಶ

ಬಡತನ ವ್ಯಾಖ್ಯಾನ ಬದಲಿಗೆ ಆಧಾರ್

ಯುಪಿಎ ಸರ್ಕಾರದ ಅವಧಿಯಲ್ಲಿ ತೀರಾ ಕೆಳಮಟ್ಟಕ್ಕೆ ಇಳಿದಿದ್ದ ದೇಶದ ವರ್ಚಸ್ಸನ್ನು ಮತ್ತೆ ಪುನರ್ ಸ್ಥಾಪಿಸುವಲ್ಲಿ ಹಾಲಿ ಕೇಂದ್ರ ಸರ್ಕಾರ ಮುಂದಾಗಿದೆ...

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ತೀರಾ ಕೆಳಮಟ್ಟಕ್ಕೆ ಇಳಿದಿದ್ದ ದೇಶದ ವರ್ಚಸ್ಸನ್ನು ಮತ್ತೆ ಪುನರ್ ಸ್ಥಾಪಿಸುವಲ್ಲಿ ಹಾಲಿ ಕೇಂದ್ರ ಸರ್ಕಾರ ಮುಂದಾಗಿದೆ. ಹಿಂದಿನ ಸರ್ಕಾರ ಅನುಸರಿಸುತ್ತಿದ್ದ ಗೊತ್ತು ಗುರಿ ಇಲ್ಲದ ಯೋಜನೆಗಳನ್ನು ಬದಲಾಯಿಸಿದೆ, ಇಲ್ಲವೇ ಪುನರ್ ರೂಪಿಸಿದೆ. ದಶಕಗಳಿಂದ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿರುವ ಬಡತನ ಮತ್ತು ಸಿರಿತನದ ವ್ಯಾಖ್ಯೆ ಮೂಲಕ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಮಾನ ಹರಾಜು ಮಾಡುತ್ತಿದ್ದ ವ್ಯವಸ್ಥೆಗೆ ತಿಲಾಂಜಲಿ ಇರಿಸಲು ಮುಂದಾಗಿದೆ ಮೋದಿ ಸರ್ಕಾರ.ಅಂದರೆ, ಈಗಾಗಲೇ ದಾಖಲೆ ನಿರ್ಮಿಸಿರುವ ಜನಧನ ಖಾತೆಗಳನ್ನು ಆಧಾರ್ ಯೋಜನೆಗೆ ಲಿಂಕ್ ಮಾಡುವ ಮೂಲಕ ಪಾರದರ್ಶಕತೆ ಪ್ರದರ್ಶಿಸಿದೆ. ಅದೇ ಮಾದರಿಯನ್ನು ಬಡತನ ಮತ್ತು ಸಿರಿತನದ ವ್ಯಾಖ್ಯೆ ಯನ್ನೂ ತರಲು ಮುಂದಾಗಿದೆ. ಅದಕ್ಕಾಗಿ ನೀತಿ ಆಯೋ ಗದ ಉಪಾ ಧ್ಯಕ್ಷರ ನೇತೃತ್ವದಲ್ಲಿ 14 ಮಂದಿ ಸದಸ್ಯರನ್ನು ಪ್ರಧಾನಿ ಮೋದಿ ರಚಿಸಿ ದ್ದಾರೆ. ಶೀಘ್ರದಲ್ಲೇ ಅದು ಈ ಬಗ್ಗೆ ಪರಾಮರ್ಶೆ ನಡೆಸಿ ವರದಿ ಸಲ್ಲಿಸಲಿದೆ.
ಕೇಂದ್ರದ ಎಲ್ಲ  ಯೋಜನೆಗಳ ಫಲಾ ನುಭವಿಗಳು ಹೊಂದಿರುವ ಬ್ಯಾಂಕ್ ಖಾತೆಗೆ ಸಬ್ಸಿಡಿ ವರ್ಗಾವಣೆಯಾಗುತ್ತಿದೆ. ಇದೀಗ ಆಧಾರನ್ನು ವಿವಿಧ ಯೋ ಜನೆಗಳ ಫ ಲಾನುಭವಿಗಳನ್ನು ಕಂಡು ಹಿಡಿಯಲು ಉಪಯೋ ಗಿಸ ಲಾಗುತ್ತದೆ. ಮುಂದಿನ ದಿನಗಳಲ್ಲಿ ಸುಲಭವಾಗಿ ಬಡವರು, ಶ್ರೀಮಂತರು ಯಾರು ಎಂದು ಕಂಡು ಹಿಡಿಯಲು ಸಾಧ್ಯ.   ಮುಂದಿನ ತಿಂಗಳ ಒಳಗಾಗಿ ದೇಶದ ಹೆಚ್ಚಿನ ಜನರಿಗೆ ಆಧಾರ್ ಕಾರ್ಡ್ ವಿತರಣೆಯಾಗಲಿದೆ. ಇದರ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಅನ್ನು ಉಪಯೋಗಿಸಲಾಗುತ್ತದೆ. ಹೀಗಾಗಿ, ಅದರ ಮೂಲಕ ನಿಜವಾಗಿ ಬಡತನ ರೇಖೆಗಿಂತ ಮೇಲ್ಪಟ್ಟವರು, ಕೆಳಗಿನವರು ಎಂಬವಿಚಾರ ತಿಳಿಯುತ್ತದೆ.

 ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ  ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲಿಸಬಹುದು. ಈ ಮೂಲಕ ನೈಜ ಫಲಾನುಭವಿಗಳನ್ನು ತಿಳಿದು ಕೊಳ್ಳಬಹುದು.

ಬದಲಾಗಬೇಕು ಬೆಳೆ ವ್ಯವಸ್ಥೆ: ಇತ್ತೀಚಿನ ವರ್ಷ ಗಳಲ್ಲಿ ದೇಶದ ಮುಂಗಾರು ವ್ಯವಸ್ಥೆ ಬದಲಾಗಿದೆ. ಹೀಗಾಗಿ, ಕೃಷಿ ವ್ಯವಸ್ಥೆಯಲ್ಲಿ ಕೂಡ ಅದೇ ಹಾದಿಯಲ್ಲಿರಬೇಕು.ಹೀಗೆಂದು ಭಾರತೀಯ ಹವಾಮಾನ ಸಂಸ್ಥೆಯ ಪುಣೆಯಲ್ಲಿರುವ ವಿಜ್ಞಾನಿಗಳು. ಏಕೆಂದರೆ, ಸಾಂಪ್ರದಾಯಿ ಕವಾಗಿ ಜೂನ್- ಜುಲೈನಿಂದ ಸೆಪ್ಟೆಂಬರ್ ವರೆಗೆ ಮಳೆ ಬರುತ್ತಿತ್ತು.
ಇದೀಗ ಅಕಾಲಿಕ (ನವೆಂಬರ್‍ನಿಂದ ಜೂನ್ ಅವಧಿ ಯಲ್ಲಿ) ಮಳೆ ಯಾಗುತ್ತಿದೆ. ಇದರಿಂದಾಗಿ ಬೆಳೆ ನಷ್ಟವಾ ಗುತ್ತಿದೆ. ಸಾಂಪ್ರದಾಯಿಕವಾಗಿ ಮಳೆಯಾಗುವ ವೇಳೆಯಲ್ಲಿ ಯೂ ಕೂಡ ದೇಶದ ವಿವಿಧ ಭಾಗಗಳಲ್ಲಿ ಬೆಳೆ ಬೆಳೆಯಲು ಉತ್ತಮವಾಗಿ ಮತ್ತು ಅಗತ್ಯ ಮಳೆ ಬೀಳಬೇಕು. ಅದರಲ್ಲೂ ಜೂನ್- ಜುಲೈನಲ್ಲಿ ಸರಿಯಾದ ಪ್ರಮಾಣದ ಮಳೆ ಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಂತೂ ಜೂನ್‍ನಲ್ಲಿ ಮಳೆ ಅಪರೂಪ. ಜುಲೈನಿಂದಲೇ ಮಳೆಗಾಲ ಆರಂಭವಾಗುವುದು ರೂಡಿಯಾಗಿದೆ. ಆಗಸ್ಟ್- ಸೆಪ್ಟೆಂಬರ್‍ನಲ್ಲೇ ಧಾರಾಕಾರ ಮಳೆಯಾಗುತ್ತದೆ.ಹೀಗಾಗಿ, ರೈತರು ಬದಲಾದ ಕಾಲಸ್ಥಿತಿಗೆ ತಕ್ಕಂತೆ ಬೆಳೆ ಪದ್ದತಿ ಬದಲು ಮಾಡಿಕೊಳ್ಳಬೇಕೆಂದು ಭಾರತೀಯ ಹವಾಮಾನ ಇಲಾಖೆಯ ಸಂಶೋಧನಾ ವಿಭಾಗದ ಗೌರವೇಂದ್ರ ಪಿ ಸಿಂಗ್ ಪ್ರತಿಪಾದಿಸುತ್ತಾರೆ. ಹಿಂದೆ ಕೂಡ ಇಂಥ ಅಧ್ಯಯನಗಳು ನಡೆದಿತ್ತು. ಆದರೆ, ಹವಾಮಾನದಲ್ಲಿ ತೀವ್ರ ಬದಲಾಗುತ್ತಿರುವ ಹಿನ್ನೆಲೆ ಯಲ್ಲಿ ಇಂಥ ನಿರ್ಧಾರ ಅಗತ್ಯ. ಈಗಾಗಲೇ ಹಲವು ತಳಿಗಳು ಈ ನಿಟ್ಟಿನಲ್ಲಿ ಅಭಿವೃದ್ಧಿ ಯಾಗಿದ್ದರೂ, ಹೆಚ್ಚಿನ ಕೃಷಿ ಕ್ಷೇತ್ರಕ್ಕೆ ಅದು ತಲುಪಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT