ಸಿಯೋಲ್: ಕರ್ತವ್ಯದ ವೇಳೆಯಲ್ಲಿ ನಿದ್ದೆ ಮಾಡಿದರೆ ಕೆಲಸದಿಂದ ಛೀಮಾರಿ ಹಾಕುವುದು, ಅಮಾನತುಗೊಳಿಸುವುದು, ಕೆಲಸ ದಿಂದ ತೆಗೆದುಹಾಕುವುದು, ಸಂಬಳದಲ್ಲಿ
ಕಡಿತ, ಹಿಂಬಡ್ತಿ ಇವೆಲ್ಲವೂ ಸಾಮಾನ್ಯ ಶಿಕ್ಷೆಗಳು. ಮರಣದಂಡನೆ ನೀಡುವುದು ಎಲ್ಲಾದರೂ ಕೇಳಿದ್ದೀರಾ? ಅಂಥದೊಂದು ಘಟನೆ ಉತ್ತರ ಕೊರಿಯ ದಲ್ಲಿ ನಡೆದಿದೆ. ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಯುನ್‍ನ ಸರ್ವಾ ಧಿಕಾರಿ ಧೋರಣೆಯಿಂ ದಾಗಿ ಕ್ಷುಲ್ಲಕ ಕಾರಣಗಳಿಗೆ ಅಧಿಕಾರಿಗಳು ಪ್ರಾಣ ಕಳೆದುಕೊಳ್ಳುತ್ತಿ ದ್ದಾರೆ. ಸಭೆ ನಡೆಯುತ್ತಿದ್ದಾಗ ನಿದ್ರಿಸುತ್ತಿ ದ್ದರೆಂಬ ಕಾರಣ ನೀಡಿ ಕಿಮ್ ತನ್ನ ಸೇನಾ ಮುಖ್ಯಸ್ಥ ಹ್ಯೊನ್ ಚಾಂಗ್ ಚೋಲ್ ರನ್ನು ಆಂಟಿ ಏರ್‍ಕ್ರಾಫ್ಟ್ ಗನ್ ಬಳಸಿ ಗುಂಡುಹಾರಿಸಿ ಕೊಂದಿದ್ದಾನೆಂದು ದಕ್ಷಿಣ ಕೊರಿಯದ ಗುಪ್ತಚರ ಸಂಸ್ಥೆ ತಿಳಿಸಿದೆ. ಏ.30ರಂದು ನಡೆದ ಈ ಘಟನೆ ಈಗ ಬೆಳಕಿಗೆ ಬಂದಿದೆ.