ದೇಶ

ಜಂಗ್‌ಗೆ ಮುಖ್ಯ ಕಾರ್ಯದರ್ಶಿ ನೇಮಕ ಮಾಡುವ ಅಧಿಕಾರ ಇಲ್ಲ: ಇಂದಿರಾ ಜೈಸಿಂಗ್

Lingaraj Badiger

ನವದೆಹಲಿ: ಅಧಿಕಾರಿಗಳ ನೇಮಕ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗ ಆನೆಬಲ ಬಂದಂತಾಗಿದೆ.

ದೆಹಲಿ ಮುಖ್ಯ ಕಾರ್ಯದರ್ಶಿ ನೇಮಕ ಸಂಬಂಧ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ನಡುವೆ ಜಂಗೀಕುಸ್ತಿ ಏರ್ಪಟ್ಟಿತ್ತು. ಈ ಸಂಬಂಧ ದೆಹಲಿ ಸರ್ಕಾರ ಕಾನೂನು ಸಲಹೆ ಕೇಳಿತ್ತು.

ಸಂವಿಧಾನದ ಪ್ರಕಾರ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡುವ ಅಧಿಕಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಇಲ್ಲ ಎಂದು ಮಾಜಿ ಅಡಿಷನಲ್ ಸೋಲಿಸಿಟರ್ ಜನರಲ್ (ಎಎಸ್‌ಜಿ) ಇಂದಿರಾ ಜೈಸಿಂಗ್ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರ ವಿವೇಚನೆಯಿಂದ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡುವಂತಿಲ್ಲ ಎಂದು ಜೈಸಿಂಗ್ ಅವರು ದೆಹಲಿ ಸರ್ಕಾರಕ್ಕೆ ತಿಳಿಸಿದ್ದಾರೆ.

ಶಕುಂತಲಾ ಗ್ಯಾಮ್ಲಿನ್ ಅವರನ್ನು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಹಂಗಾಮಿ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು. ಇದು ಗವರ್ನರ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ನಡುವೆ ಜಂಗೀಕುಸ್ತಿಗೆ ಕಾರಣವಾಗಿತ್ತು.

SCROLL FOR NEXT