ನವದೆಹಲಿ: ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರಸಾರ ಭಾರತಿ ರೈತರಿಗೋಸ್ಕರ 'ಡಿಡಿ ಕಿಸಾನ್' ಎಂಬ ವಾಹಿನಿಯನ್ನು ಲೋಕಾರ್ಪಣೆ ಮಾಡಿದೆ.
ರೈತ ಮತ್ತು ಕೃಷಿ ಸಂಬಂಧಿತ ಕಾರ್ಯಕ್ರಮಗಳಿಗಾಗಿಯೇ ಕೇಂದ್ರ ಸರ್ಕಾರ ನೂತನ ಪ್ರತ್ಯೇಕ ವಾಹಿನಿಯೊಂದನ್ನು ಹುಟ್ಟುಹಾಕಿದ್ದು, ಡಿಡಿ ಕಿಸಾನ್ ಎಂದು ನಾಮಕರಣಗೊಳಿಸಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಸಾರಭಾರತಿ ಕೇಂದ್ರದಿಂದ ಈ ನೂತನ ಡಿಡಿ ಕಿಸಾನ್ ವಾಹಿನಿಗೆ ಚಾಲನೆ ನೀಡುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ.