(ಸಂಗ್ರಹ ಚಿತ್ರ) 
ದೇಶ

ಶಾರುಖ್ ಖಾನ್'ನನ್ನು ಉಗ್ರ ಹಫೀಸ್'ಗೆ ಹೋಲಿಕೆ ಮಾಡಿದ ಯೋಗಿ ಆದಿತ್ಯನಾಥ್

ಅಸಹಿಷ್ಣುತೆ ಕುರಿತಂತೆ ನಟ ಶಾರುಖ್ ಖಾನ್ ನೀಡಿದ್ದ ಹೇಳಿಕೆ ಇದೀಗ ಹಲವು ವಿವಾದಗಳನ್ನು ಸೃಷ್ಟಿ ಮಾಡುತ್ತಿದ್ದು, ಇದೀಗ ಬಿಜೆಪಿಯ ಮತ್ತೊಬ್ಬ ನಾಯಕ ಶಾರುಖ್ ಖಾನ್ ಅವರನ್ನು ಉಗ್ರ ಹಫೀಜ್ ಗೆ ಹೋಲಿಕೆ ಮಾಡಿದ್ದಾರೆ...

ನವದೆಹಲಿ: ಅಸಹಿಷ್ಣುತೆ ಕುರಿತಂತೆ ನಟ ಶಾರುಖ್ ಖಾನ್ ನೀಡಿದ್ದ ಹೇಳಿಕೆ ಇದೀಗ ಹಲವು ವಿವಾದಗಳನ್ನು ಸೃಷ್ಟಿ ಮಾಡುತ್ತಿದ್ದು, ಇದೀಗ ಬಿಜೆಪಿಯ ಮತ್ತೊಬ್ಬ ನಾಯಕ ಶಾರುಖ್ ಖಾನ್ ಅವರನ್ನು ಉಗ್ರ ಹಫೀಜ್ ಗೆ ಹೋಲಿಕೆ ಮಾಡಿದ್ದಾರೆ.

ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್ ಶಾರುಖ್ ಖಾನ್ ಅವರನ್ನು ಮುಂಬೈ ದಾಳಿಯ ಸಂಚುಕೋರ ಉಗ್ರ ಹಫೀಜ್ ಸಯೀದ್ ಗೆ ಹೋಲಿಕೆ ಮಾಡಿದ್ದಾರೆ.

ಶಾರುಖ್ ಖಾನ್ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮುಸ್ಲಿಮರು ಅವರ ಸಿನಿಮಾ ನೋಡಲಿಲ್ಲ ಎಂದರೆ, ಇಂದು ಶಾರುಕ್ ರಸ್ತೆಯಲ್ಲಿರುತ್ತಿದ್ದರು ಎಂಬುದನ್ನು ನಟ ಶಾರುಖ್ ಖಾನ್ ಅರ್ಥ ಮಾಡಿಕೊಳ್ಳಬೇಕು. ಶಾರುಖ್ ಖಾನ್ ಹಾಗೂ ಉಗ್ರ ಹಫೀಜ್ ನೀಡುವ ಹೇಳಿಕೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಶಾರುಖ್ ಹೇಳಿಕೆಗೆ ಈ ಹಿಂದೆ ಪ್ರತಿಕ್ರಿಯೆ ನೀಡಿ ಮತ್ತೆ ಹೇಳಿಕೆಯನ್ನು ಹಿಂಪಡೆದಿದ್ದ ವಿಜಯವರ್ಗೀಯ ಅವರಿಗೆ ಅವರ ಪಕ್ಷದಿಂದ ಹಾಗೂ ಇತರರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ನಟ ಶಾರುಖ್ ಖಾನ್ ನೀಡಿದ್ದ ಅಸಹಿಷ್ಣುತೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವರು, ಶಾರುಖ್ ಖಾನ್ ಒಬ್ಬ ದೇಶದ್ರೋಹಿ. ಅವರು ಭಾರತದಲ್ಲೇ ನೆರೆಸಿದ್ದರೂ ಆತ್ಮ ಮಾತ್ರ ಪಾಕಿಸ್ತಾನದಲ್ಲಿದೆ. ಅವರ ಚಿತ್ರಗಳಿಗೆ ಕೋಟಿಗಟ್ಟಲೆ ಹಣ ಭಾರತದಿಂದ ಬರುತ್ತದೆ. ಆದರೆ ಇಂದು ಭಾರತದಲ್ಲಿಯೇ ಅಸಹಿಷ್ಣುತೆಯಿದೆ ಎಂದು ಆಲೋಚಿಸುತ್ತಿದ್ದಾರೆಂದು ಎಂದು ಹೇಳಿದ್ದರು. ವರ್ಗೀಯ ಅವರ ಹೇಳಿಕೆಗೆ ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲತಾಣದಾದ್ಯಂತ ಹಲವು ಟೀಕೆಗಳು ವ್ಯಕ್ತವಾಗಿದ್ದವು.

ನಂತರ ತಮ್ಮ ಹೇಳಿಕೆಯನ್ನು ಹಿಂಪಡೆದ ವರ್ಗೀಯ ಅವರು  ಶಾರುಖ್ ಖಾನ್ ಶ್ರೇಷ್ಠ ನಟರಾಗಿದ್ದು, ನನಗೆ ಯಾರನ್ನೂ ನೋವುಂಟು ಮಾಡುವ ಉದ್ದೇಶವಿರಲಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್