ನವದೆಹಲಿ: ಸ್ಮಾರ್ಟ್‍ಫೋನ್‍ಗಳ ಬಳಕೆ ಒಂದೊಂದು ರೀತಿಯಲ್ಲಲ್ಲ. ಈಗ ಎಲ್ಲದಕ್ಕೂ ಸ್ಮಾರ್ಟ್ ಫೋನ್. ಖರೀದಿ, ಮಾರಾಟ, ಸಂಪರ್ಕ ಸೇರಿದಂತೆ ಇಡೀ ಜಗತ್ತು ಸ್ಮಾರ್ಟ್ ಫೋನ್‍ಮಯ. ಇನ್ನು ಮುಂದೆ ದೇವರ ಕಥೆಗಳು, ನಾಟಕ ಪ್ರಸಂಗಗಳು ಸ್ಮಾರ್ಟ್‍ಫೋನ್ ನಲ್ಲಿ ಲಭ್ಯ. ಒಮ್ಮೆಗೆ ಒಂದು ಪುಸ್ತಕ ಡೌನ್‍ಲೋಡ್ ಮಾಡಿಕೊಳ್ಳುವ ಕಷ್ಟವೂ ಇಲ್ಲ.
ದಿನಕ್ಕೊಂದು ಅಧ್ಯಾಯ ಡೌನ್‍ಲೋಡ್ ಮಾಡಿಕೊಂಡು ಓದಬಹುದು. ಪ್ರಕಾಶಕ ಸಂಸ್ಥೆ ವೆಸ್ಟ್‍ಲ್ಯಾಂಡ್ ಮೊಬೈಲ್ ಪ್ರಸಾರ ಸಂಸ್ಥೆ ಡೈಲಿಹಂಟ್ ಜೊತೆ ಮೈತ್ರಿ ಮಾಡಿಕೊಂಡಿದೆ. ಲೇಖಕ ಅಮಿಶ್ ತ್ರಿಪಾಠಿಯವರ ಶಿವನ ನಾಟಕಗಳನ್ನು ಬಿಡುಗಡೆ ಮಾಡಲಿದೆ.
ತಮ್ಮ ವೆಬ್‍ಸೈಟ್‍ನಲ್ಲಿ ಪ್ರತಿದಿನ ಒಂದೊಂದು ಅಧ್ಯಾಯ ಪ್ರಕಟಿಸಲಿದ್ದು ಇಚ್ಚೆಯುಳ್ಳವರು ಡೌನ್‍ಲೋಡ್ ಮಾಡಿ ಓದಬಹುದಾಗಿದೆ. ಜಪಾನ್ ನಲ್ಲಿ ಈಗಾಗಲೆ ಇಂತಹ ವ್ಯವಸ್ಥೆ ಇದೆ. ಅಲ್ಲಿ ಪುಸ್ತಕವೊಂದರಲ್ಲಿ ತಮಗೆ ಬೇಕಾದ ಅಧ್ಯಾಯ ಡೌನ್‍ಲೋಡ್ ಮಾಡಿ ಓದಬಹುದು.
ಅಂತದೇ ವ್ಯವಸ್ಥೆಯನ್ನು ಭಾರತದಲ್ಲಿ ಪರಿಚಯಿಸಲಾಗುತ್ತಿದೆ. ಭಾರತದಲ್ಲಿ ಇದು ಮೊದಲು ಪ್ರಯತ್ನ. ತ್ರಿಪಾಠಿಯವರ ಶಿವನ ಮೂರು ನಾಟಕಗಳು ಭಾರತದ 16 ಮತ್ತು ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಲಭ್ಯವಿದೆ.
ದೇಶದ ಒಂಬತ್ತು ಭಾಷೆಗಳಲ್ಲಿ ಡೌನ್‍ಲೋಡ್‍ಗೆ ಮಾಡಬಹು ದು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಗುಜರಾತಿ, ಮರಾಠಿ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಧ್ಯಾಯಗಳು ಸಿಗಲಿವೆ. ಪ್ರತಿ ಅಧ್ಯಾಯ ಡೌನ್‍ಲೋಡ್‍ಗೆ ರು.15 ಶುಲ್ಕವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics