೧೫ರಿಂದ ಸ್ವಚ್ಛ ಭಾರತಕ್ಕೆ ಸೆಸ್
ಸ್ವಚ್ಛ ಭಾರತ ಯೋಜನೆಗೆ ನಿಧಿ ಸಂಗ್ರಹಿಸಲು ಕೇಂದ್ರ ಸರ್ಕಾರ ಎಲ್ಲ ಸೇವೆಗಳಿಗೂ ಶೇ. ೦.೫ ಹೆಚ್ಚುವರಿ ಸೆಸ್ ವಿಧಿಸಲು ಮುಂದಾಗಿದೆ...
ನವದೆಹಲಿ: ಸ್ವಚ್ಛ ಭಾರತ ಯೋಜನೆಗೆ ನಿಧಿ ಸಂಗ್ರಹಿಸಲು ಕೇಂದ್ರ ಸರ್ಕಾರ ಎಲ್ಲ ಸೇವೆಗಳಿಗೂ ಶೇ. ೦.೫ ಹೆಚ್ಚುವರಿ ಸೆಸ್ ವಿಧಿಸಲು ಮುಂದಾಗಿದೆ. ನ.೧೫ ರಿಂದ ವಿಮಾನ ಪ್ರಯಾಣ, ದೂರವಾಣಿ, ಹೋಟೆಲ್ ಸೇವೆ, ಬ್ಯಾಂಕಿಂಗ್ ಸೇರಿದಂತೆ ಎಲ್ಲ ಸೇವೆಗಳಿಗೂ ಈ ಸೆಸ್ ಅನ್ವಯವಾಗಲಿದೆ.
ಈಗಾಗಲೇ ವಿಧಿಸಲಾಗಿರುವ ೧೪ ಶೇಕಡ ಸೇವಾ ತೆರಿಗೆಯ ಮೇಲಿನಿಂದ ಈ ಸೆಸ್ ಅನ್ವಯವಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ರು.೪೦೦ ಕೋಟಿ ಹೆಚ್ಚುವರಿ ಹಣಕಾಸು ತಂದು ಕೊಡಲಿದೆ. ಈ ವರ್ಷದ ಬಜೆಟ್ ಮಂಡನೆ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಸೇವೆಗಳ ಮೇಲೆ ಅಗತ್ಯಬಿದ್ದರೆ ಶೇ.೨ರಷ್ಟು ಲೆವಿ ವಿಧಿಸುವ ವಿಚಾರ ಪ್ರಸ್ತಾಪಿಸಿದ್ದರು.
ಹೊಸ ತೆರಿಗೆಯಂತೆ, ನೀವು ಪಡೆಯುವ ಪ್ರತಿ ನೂರು ರುಪಾಯಿ ಮೌಲ್ಯದ ಸೇವೆಗೂ ೦.೫೦ ಪೈಸೆ ಸ್ವಚ್ಛ ಭಾರತ ನಿಧಿಗೆ ನಿಡಬೇಕು. ಸ್ವಚ್ಛ ಭಾರತ ತೆರಿಗೆಯು ಪ್ರತಿ ಪ್ರಜೆಯೂ ಈ ಯೋಜನೆಗೆ ದೇಣಿಗೆ ನೀಡುವಂತೆ ಮಾಡುವ ಒಂದು ಉಪಕ್ರ ಮ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ. ಇದೀಗ ಆರೋಗ್ಯ ಯೋಜನೆಗಳಿಗಾಗಿ ವಾರ್ಷಿಕ ರು.೬೭೦೦ ಕೋಟಿ ವ್ಯಯ ಮಾಡಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.