ಪಾಟ್ನ: ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಭಾನುವಾರ ಆರಂಭವಾಗಿದ್ದು, ಎನ್ ಡಿಎ ಮೈತ್ರಿ ಕೂಡ ಮುನ್ನಡೆ ಸಾಧಿಸಿದೆ.
ಮುಂದಿನ 5 ವರ್ಷಗಳ ಅವಧಿಗೆ ಬಿಹಾರದ ಆಡಳಿತ ಯಾರ ಕೈಗೆ ದೊರೆಯಲಿದೆ? ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ಅಧಿಕಾರಕ್ಕೇರಲಿದೆಯೇ ಅಥವಾ ನಿತೀಶ್ ಕುಮಾರ್ ನೇತೃತ್ವದ ಮಹಾ ಮೈತ್ರಿಕೂಡ ಅಧಿಕಾರಕ್ಕೇರಲಿದೆಯೇ ಎಂಬ ಹಲವು ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.
ಪ್ರಸ್ತುತ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬಿಜೆಪಿಗೆ 103 ಸ್ಥಾನ ಲಭಿಸಿದ್ದು, ಜೆಡಿಯು-ಆರ್ ಜೆಡಿ ಪಕ್ಷಕ್ಕೆ 105 ಸ್ಥಾನ ಲಭಿಸಿದೆ. ಇನ್ನುಳಿದಂತೆ ಇತರೆ ಪಕ್ಷಗಳಿಗೆ 5 ಸ್ಥಾನ ಲಭಿಸಿರುವುದಾಗಿ ತಿಳಿದುಬಂದಿದೆ. 243 ಸೀಟುಗಳ ಪೈಕಿ 213 ಸ್ಥಾನಗಳ ಫಲಿತಾಂಶದ ವಿವರಗಳು ಲಭ್ಯವಾಗಿದ್ದು, ಇನ್ನೂ 30 ಸೀಟುಗಳ ಫಲಿತಾಂಶಗಳ ವಿವರ ಲಭ್ಯವಾಗಬೇಕಿದೆ. ಇಂದು ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳಲಿದ್ದು, ಬಿಹಾರದ ಗದ್ದುಗೆ ಯಾರ ಪಾಲಿಗೆ ಒಲಿಯಲಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.