ವಿಧವೆಗೆ ಸಂಪೂರ್ಣ ಆಸ್ತಿ ಹಕ್ಕು ಇದೆ: ಸುಪ್ರೀಂ
ಹಿಂದೂ ವಿಧವೆಯ ಆಸ್ತಿ ಹಕ್ಕು ಕೇವಲ ಔಪಚಾರಿಕ ಹಕ್ಕಲ್ಲ, ಅದು ಆಧ್ಯಾತ್ಮಿಕ ಹಾಗೂ ನೈತಿಕವಾಗಿ ಆಕೆಯ ಸಂಪೂರ್ಣ ಹಕ್ಕು...
ನವದೆಹಲಿ: ಹಿಂದೂ ವಿಧವೆಯ ಆಸ್ತಿ ಹಕ್ಕು ಕೇವಲ ಔಪಚಾರಿಕ ಹಕ್ಕಲ್ಲ, ಅದು ಆಧ್ಯಾತ್ಮಿಕ ಹಾಗೂ ನೈತಿಕವಾಗಿ ಆಕೆಯ ಸಂಪೂರ್ಣ ಹಕ್ಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ತನ್ನ ಆಸ್ತಿಯ ಹಕ್ಕನ್ನು ಅನ್ಯರೊಬ್ಬರಿಗೆ ನೀಡಿ ವೀಲುನಾಮೆ ಮಾಡಿದ್ದ ಆಂಧ್ರದ ವಿಧವೆಯೊಬ್ಬರ ಹಕ್ಕನ್ನು ಎತ್ತಿಹಿಡಿದಿದ್ದ ಆಂಧ್ರ ಹೈಕೋರ್ಟ್ ನ ತೀರ್ಪನ್ನು ಸುಪ್ರೀಂ ಸಮರ್ಥಿಸಿದೆ.
ತನ್ನ ಆಸ್ತಿಯನ್ನು ಆಕೆ ಇಷ್ಟ ಬಂದಂತೆ ಬಳಸಿಕೊಳ್ಳಲು ಸ್ವತಂತ್ರಳು ಎಂದು ನ್ಯಾಯಪೀಠ ಹೇಳಿದೆ. ಹಿಂದೂ ಕಾನೂನಿನಲ್ಲಿ, ಪತ್ನಿಗೆ ಜೀವನಾಂಶ ನೀಡುವ ಬಾಧ್ಯತೆ ಪತಿಯದ್ದಾಗಿದೆ.
ವಿಧವೆಗೆ ಆಸ್ತಿ ನೀಡಬೇಕಾದ್ದು ಔಪಚಾರಿಕವಲ್ಲ, ಅದು ಆಕೆಯ ಮೌಲಿಕ, ಆಧ್ಯಾತ್ಮಿಕ, ನೈತಿಕ ಹಕ್ಕು. ಕಾಯ್ದೆಯ 14(1) ವಿಧಿಯನ್ವಯ ಜೀವನಾಂಶ ಆಕೆಯ ಸಂಪೂರ್ಣ ಹಕ್ಕಾಗುತ್ತದೆ ಎಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.