ದೇಶ

ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾಳಂಗಿ ಡ್ಯಾಮ್ ಕ್ರಸ್ಟ್ ಗೇಟ್

Srinivasamurthy VN

ಚಿತ್ತೂರು: ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿಯಲ್ಲಿರುವ ಕಾಳಂಗಿ ಜಲಾಶಯದ ಕ್ರಸ್ಟ್ ಗೇಟ್ ವೊಂದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ ಎಂದು ತಿಳಿದುಬಂದಿದೆ.

ಕಾಳಂಗಿ ನದಿಗೆ ಅಡ್ಡಲಾಗಿ 1960ರಲ್ಲಿ ಈ ಜಲಾಶಯವನ್ನು ನಿರ್ಮಿಸಲಾಗಿತ್ತು. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಡ್ಯಾಂ ಗೆ ಅಪಾರ ಪ್ರಮಾಣದ ನೀರು  ಹರಿದುಬಂದಿತ್ತು. ನೀರಿನ ರಭಸ ತಡೆಯಲಾಗದೇ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಲಾಶಯದ ಒಟ್ಟು ಉದ್ದ 68.28 ಮೀಟರ್ ಆಗಿದ್ದು,  ಜಲಾಶಯದಲ್ಲಿ ನೀರಿನ ಮಟ್ಟ 67.67 ಮೀಟರ್ ಆಗಿತ್ತು. ನೀರು ಅಪಾಯದ ಮಟ್ಟ ಮೀರಿದ್ದ ಹಿನ್ನಲೆಯಲ್ಲಿ ಸಿಬ್ಬಂದಿಗಳು ಕ್ರಸ್ಟ್ ಗೇಟ್ ಅನ್ನು ತೆರೆದಾಗ ನೀರಿನ ರಭಸಕ್ಕೆ ಗೇಟ್ ಕೊಚ್ಚಿಕೊಂಡು  ಹೋಗಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT