ದಾವೂದ್ ಇಬ್ರಾಹಿಂ -ನೀರಜ್ ಕುಮಾರ್ 
ದೇಶ

ಬಾಲಿವುಡ್ ನಟಿ ಜತೆ ದಾವೂದ್ ರಹಸ್ಯ ವಿವಾಹ; ಈತನ ಮಗ ಬೆಂಗಳೂರಲ್ಲಿದ್ದಾನೆ!

ಭೂಗತಲೋಕದ ದೊರೆ ದಾವೂದ್ ಇಬ್ರಾಹಿಂ ಬಾಲಿವುಡ್ ನಟಿಯೊಬ್ಬಳನ್ನು ರಹಸ್ಯವಾಗಿ ವಿವಾಹವಾಗಿದ್ದಾನೆ. ಈ ಸಂಬಂಧದಲ್ಲಿ ದಾವೂದ್‌ಗೆ ಒಬ್ಬ ಮಗನೂ ಇದ್ದಾನೆ...

ಮುಂಬೈ: ಭೂಗತಲೋಕದ ದೊರೆ ದಾವೂದ್ ಇಬ್ರಾಹಿಂ ಬಾಲಿವುಡ್ ನಟಿಯೊಬ್ಬಳನ್ನು ರಹಸ್ಯವಾಗಿ ವಿವಾಹವಾಗಿದ್ದಾನೆ. ಈ ಸಂಬಂಧದಲ್ಲಿ ದಾವೂದ್‌ಗೆ ಒಬ್ಬ ಮಗನೂ ಇದ್ದಾನೆ ಎಂಬ ವಿಷಯ ಬಹಿರಂಗವಾಗಿದೆ. ದೆಹಲಿ ಮಾಜಿ ಪೊಲೀಸ್ ಕಮಿಷನರ್ ಹಾಗೂ ಸಿಬಿಐ ಡೆಪ್ಯುಟಿ ನಿರ್ದೇಶಕರು ಆಗಿದ್ದ  ನೀರಜ್ ಕುಮಾರ್ ತಮ್ಮ 'ಡಯಲ್ ಡಿ ಫಾರ್ ಡಾನ್‌' ಎಂಬ ಪುಸ್ತಕದಲ್ಲಿ ಈ ವಿಷಯವನ್ನು ದಾಖಲಿದ್ದಾರೆ. ದಾವೂದ್‌ನ ಈ ರಹಸ್ಯ ಮಗ ಬೆಂಗಳೂರಿನಲ್ಲಿ ನೆಲೆಸಿದ್ದಾನೆ ಎಂಬ ವಿಷಯವನ್ನೂ ಪುಸ್ತಕದಲ್ಲಿ ದಾಖಲಿಸಲಾಗಿದ್ದು, ಶನಿವಾರ ಪುಸ್ತಕ ಲೋಕಾರ್ಪಣೆಯಾಗಲಿದೆ.
1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದ ತನಿಖೆ ನಡೆಸುತ್ತಿದ್ದ ವೇಳೆ ದಾವೂದ್ ಅವರ ಹಲವಾರು ಸಹಚರರನ್ನು ಬಂಧಿಸಲಾಗಿತ್ತು. ಹೀಗೆ ಬಂಧಿತರಾದವರು ಹೇಳಿದ ಮಾಹಿತಿಯ ಮೇರೆಗೆ ದಾವೂದ್‌ನ ಬಲಗೈ ಬಂಟ ಅಹಮ್ಮದ್ ಮನ್ಸೂರ್‌ನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ದಾವೂದ್‌ನ ಹವಾಲಾ ಕಾರ್ಯಗಳನ್ನೆಲ್ಲಾ ನಿರ್ವಹಿಸುತ್ತಿದ್ದದ್ದು ಇದೇ ಮನ್ಸೂರ್.  ಮಾತ್ರವಲ್ಲದೆ ದಾವೂದ್‌ನ್ನು ಬಾಲ್ಯದಿಂದಲೇ ಬಲ್ಲವನಾಗಿದ್ದಾನೆ ಮನ್ಸೂರ್.
ಬಂಧಿತನಾದ ಮನ್ಸೂರ್ ದಾವೂದ್‌ನ ದುಬೈ ಜೀವನದ ಬಗ್ಗೆ ನಮ್ಮಲ್ಲಿ ಹೇಳಿದ್ದು ಅಂತಾರೆ ನೀರಜ್ ಕುಮಾರ್. ದಾವೂದ್‌ಗೆ ಕ್ರಿಕೆಟ್ ಮತ್ತು ಬಾಲಿವುಡ್ ಎಂದರೆ ಅಚ್ಚುಮೆಚ್ಚು.  ದಾವೂದ್ ಹೇಳಿದರೆ ಮುಗೀತು, ಮುಂಬೈ ಅದನ್ನು ಪಾಲಿಸುತ್ತಿತ್ತು. ಸಿನಿಮಾ ರಿಲೀಸ್ ದಿನ ಮತ್ತು ರಿಯಲ್ ಎಸ್ಟೇಟ್ ಸಂಬಂಧಿ ವಿಷಯಗಳಲ್ಲಿ ದಾವೂದ್ ಭಾಗಿಯಾಗುತ್ತಿದ್ದರು. ಬಾಲಿವುಡ್ ಸಿನಿಮಾಗಳಲ್ಲಿ ಯಾರು ನಟಿಸಬೇಕು ಎಂಬುದನ್ನೂ ಆತನೇ ತೀರ್ಮಾನಿಸುತ್ತದ್ದನು. ಈ ಎಲ್ಲ ಕಾರ್ಯಗಳ ನಿರ್ವಹಣೆಗಾಗಿ ದುಬೈನಲ್ಲಿ ದಾವೂದ್‌ನ ನ್ಯಾಯಾಲಯವೇ ಇತ್ತು. ಆತನಿಗೆ ಬಾಲಿವುಡ್ ನಟಿಯರೆಂದರೆ ಅತ್ಯಂತ ಒಲವು. ಹೀಗಿರುವಾಗ ಬಾಲಿವುಡ್ ನಟಿಯೊಬ್ಬಳನ್ನು ಆತ ರಹಸ್ಯವಾಗಿ ಮದುವೆಯಾಗಿದ್ದಾನೆ. ಇದರಲ್ಲಿ ಮಗನೊಬ್ಬ ಜನಿಸಿದ್ದು, ಆತ ಸಿನಿಮಾನಟಿಯ ಸಹೋದರಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾನೆ ಎಂದು ನೀರಜ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT