ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ (ಸಂಗ್ರಹ ಚಿತ್ರ) 
ದೇಶ

ನಿತೀಶ್ ನೋಡಿ ಕಲಿಯಿರಿ: ಜಯಲಲಿತಾಗೆ ಸ್ಟಾಲಿನ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮದ್ಯ ನಿಷೇಧ ಮಾಡಿರುವುದನ್ನು ಹಾಡಹೊಗಳಿರುವ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಅವರು ನಿತೀಶ್ ಕುಮರ್ ಅವರನ್ನು ನೋಡಿ ಕಲಿಯುವಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಶುಕ್ರವಾರ...

ಚೆನ್ನೈ; ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮದ್ಯ ನಿಷೇಧ ಮಾಡಿರುವುದನ್ನು ಹಾಡಹೊಗಳಿರುವ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಅವರು ನಿತೀಶ್ ಕುಮರ್ ಅವರನ್ನು ನೋಡಿ ಕಲಿಯುವಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಶುಕ್ರವಾರ ಹೇಳಿದ್ದಾರೆ.

ಬಿಹಾರ ಮದ್ಯ ನಿಷೇಧ ಕುರಿತಂತೆ ಮಾತನಾಡಿರುವ ಅವರು, ನಿತೀಶ್ ಅವರ ನಿರ್ಧಾರವೊಂದು ಐತಿಹಾಸಿಕವಾಗಿದ್ದು, ಇದೊಂದು ಮಾನವೀಯತೆ ನಿರ್ಧಾರವಾಗಿದೆ. ದೇಶದ ಅಭಿವೃದ್ಧಿಗೆ ದಾರಿತೋರುವ ನಿರ್ಧಾರವಾಗಿದೆ. ನಿತೀಶ್ ನಿರ್ಧಾರ ನಿಜಕ್ಕೂ ಪ್ರೋತ್ಸಾಹಕ ನಿರ್ಧಾರವಾಗಿದ್ದು, ಜನರ ಕಲ್ಯಾಣಕ್ಕಾಗಿ ಅವರು ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆಂಬುದು ಈ ನಿರ್ಧಾರದಿಂದ ತಿಳಿಯುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಜಯಲಲಿತಾ ಕುರಿತಂತೆ ಮಾತನಾಡಿರುವ ಅವರು, ಜಯಲಲಿತಾ ಅವರು ನಿತೀಶ್ ಕುಮಾರ್ ಅವರನ್ನು ಅನುಸರಿಸಬೇಕಿದ್ದು, ಮದ್ಯ ನಿಷೇಧ ಕುರಿತಂತೆ ಅವರು ಮಾಡುತ್ತಿರುವ ಆಳವಿಲ್ಲದ ವಾದಗಳನ್ನು ನಿಲ್ಲಿಸಬೇಕಿದೆ ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್ ಅವರು ಜನರ ಸಂಕಷ್ಟ ಹಾಗೂ ಅವರ ಅಗತ್ಯಗಳನ್ನು ಅರಿತುಕೊಂಡಿದ್ದಾರೆ. ಹೀಗಾಗಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮದ್ಯ ನಿಷೇಧ ಕುರಿತಂತೆ ಬಿಹಾರದಲ್ಲಿ ವಿರೋಧ ಪಕ್ಷಗಳು ಕೂಡ ಯಾವುದೇ ವಿರೋಧವಾಗಲಿ ಪ್ರತಿಭಟನೆಗಳಾಗಲಿ ತಮಿಳುನಾಡಿನಂತೆ ಮಾಡುತ್ತಿಲ್ಲ. ಮದ್ಯವು ತಮಿಳುನಾಡಿನ ಮೇಲೆ ಪರಿಣಾಮ ಬೀರಿದ್ದು, ಬಡ ಕುಟುಂಬಗಳ ಮೇಲೆ ಹೊಡೆತ ಬೀಳುತ್ತಿದೆ. ಜಯಲಲಿತಾ ಅವರ ಸರ್ಕಾರ ಸ್ವಾರ್ಥತೆಯಿಂದ ಅವರ ಆಸಕ್ತಿಗೆ ತಕ್ಕಂತೆಯಷ್ಟೇ ನಡೆಯುತ್ತಿದೆ. ಅವರು ಜನರ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮದ್ಯ ನಿಷೇಧ ಕುರಿತಂತೆ ಈಗಾಗಲೇ ಸಾಕಷ್ಟು ರಾಜಕೀಯ ಪಕ್ಷಗಳು ಆಗ್ರಹ ಹಾಗೂ ಪ್ರತಿಭಟನೆಗಳನ್ನು ಮಾಡಿದ್ದರೂ, ಎಐಎಡಿಎಂಕೆ ಸರ್ಕಾರ ಜನರ ನಂಬಿಕೆ ಹಾಗೂ ಆಸಕ್ತಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ