ದೇಶ

ಅತಿಥಿ ಗೃಹದ ಮಾಲೀಕನಿಂದ ಯುವತಿ ಮೇಲೆ ಅತ್ಯಾಚಾರ

Srinivasamurthy VN

ಗುರ್ಗಾಂವ್: ಎಂಎನ್ ಸಿ ಕಂಪನಿಯಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ 21 ವರ್ಷದ ಯುವತಿಯೊಬ್ಬಳ ಮೇಲೆ ಅತಿಥಿ ಗೃಹ ಮಾಲೀಕನ್ನೊಬ್ಬ ಅತ್ಯಾಚಾರ ಮಾಡಿರುವ ಘಟನೆಯೊಂದು ಗುರ್ಗಾಂವ್ ನ ಸೆಕ್ಟರ್-39ನಲ್ಲಿ ಶನಿವಾರ ನಡೆದಿದೆ.

ಪಂಜಾಬ್ ನ ಲುಧಿಯಾನ ಮೂಲದ ಯುವತಿ ಎಂಎನ್ ಸಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಳು. ಸೆಕ್ಟರ್-39ರ ಪಿಜಿ( ಪಾವತಿ ಅತಿಥಿ ಗೃಹ)ಯೊಂದರಲ್ಲಿ ಉಳಿದುಕೊಂಡಿದ್ದಳು.

ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಬಲವಂತವಾಗಿ ರೂಮಿನೊಳಗೆ ಬಂದ ಅತಿಥಿ ಗೃಹದ ಮಾಲೀಕ ಧರ್ಮವೀರ್ ಠಕ್ರನ್ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಯುವತಿ ಗುರ್ಗಾಂವ್ ನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಅತ್ಯಾಚಾರ ಮಾಡಿದ ಧರ್ಮವೀರ್ ತಲೆ ಮರೆಸಿಕೊಂಡಿದ್ದು, ಹುಡುಕಾಟ ಆರಂಭಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ದೀಪಕ್ ಸಹರನ್ ಅವರು ಹೇಳಿದ್ದಾರೆ.

SCROLL FOR NEXT