(ಸಾಂದರ್ಭಿಕ ಚಿತ್ರ) 
ದೇಶ

ಬಿಸಿಯೂಟಕ್ಕಿನ್ನು ಪರೀಕ್ಷೆ

ಇನ್ನು ಮುಂದೆ ದೇಶದ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಮಧ್ಯಾಹ್ನದ ಊಟವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ...

ನವದೆಹಲಿ: ಇನ್ನು ಮುಂದೆ ದೇಶದ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಮಧ್ಯಾಹ್ನದ ಊಟವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಸರ್ಕಾರಿ ಪ್ರಯೋಗಶಾಲೆ ಅಥವಾ ಮಾನ್ಯತೆ ಪಡೆದ ಪ್ರಯೋಗಶಾಲೆಗಳು ಊಟದಲ್ಲಿ ಇರಬೇಕಾದ ಪೌಷ್ಟಿಕಾಂಶಗಳ ಬಗ್ಗೆ ಪರೀಕ್ಷೆ ನಡೆಸಿ ವರದಿ ನೀಡಲಿವೆ. ಇದರ ಜತೆಗೆ ಮಧ್ಯಾಹ್ನದ ಊಟ ನೀಡಲು ಅಸಾಧ್ಯವಾದರೆ ಮಕ್ಕಳಿಗೆ ಭತ್ಯೆ ಸಿಗಲಿದೆ. ಅದನ್ನು ಪ್ರತಿ ತಿಂಗಳ 15ರಂದು ನೀಡಬೇಕೆಂದು ಗಡುವನ್ನೂ ವಿಧಿಸಲಾಗಿದೆ. ಕೇಂದ್ರ ಸರ್ಕಾರ ಮಧ್ಯಾಹ್ನದ ಬಿಸಿಯೂಟದ ನಿಯಮಾವಳಿಗಳನ್ನು ಪರಿಷ್ಕರಿಸಿ ಗುರುವಾರ ಅಧಿಸೂಚನೆ ಹೊರಡಿಸಿದೆ.

ಅಂದ ಹಾಗೆ ಮಧ್ಯಾಹ್ನದ ಬಿಸಿ ಊಟ ನೀಡದೇ ಇದ್ದರೆ, ಮಕ್ಕಳಿಗೆ ಬಿಸಿ ಊಟದ ಭತ್ಯೆಯನ್ನು ರಾಜ್ಯ ಸರ್ಕಾರ ನೀಡಬೇಕು. ಪರಿಷ್ಕತ ನಿಯಮಗಳ ಪ್ರಕಾರ, ಮಧ್ಯಾಹ್ನದ ಬಿಸಿಯೂಟಕ್ಕೆ ಹಣದ ಕೊರತೆಯಾದಾಗ ಶಾಲೆಯಲ್ಲಿರುವ ಇತರ ಅನುದಾನವನ್ನು ಬಳಸಿಕೊಳ್ಳಲು ಆಯಾ ಶಾಲಾಮುಖ್ಯಸ್ಥರಿಗೆ ಅವಕಾಶ ಕಲ್ಪಿಸಲಾಗಿದೆ. ಶಾಲೆಯಲ್ಲಿ ಸತತ ಮೂರು ದಿನ ಬಿಸಿ ಊಟ ನೀಡದಿದ್ದರೆ, ಅಥವಾಒಂದು ತಿಂಗಳಲ್ಲಿ ಐದು ದಿನ ಬಿಸಿ ಊಟ ನೀಡಿದೇ ಇದ್ದರೆ, ಸಂಬಂಧಿಸಿ ದವರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ರಾಜ್ಯಸರ್ಕಾರಕ್ಕೆ ವಹಿಸಲಾಗಿದೆ. ಊಟಕ್ಕೆ ಪರೀಕ್ಷೆ: ಮದ್ಯಾಹ್ನದ ಬಿಸಿ ಊಟದ ಗುಣಮಟ್ಟ ಮತ್ತು ನಿಗದಿತ ಪೌಷ್ಟಿಕಾಂಶ ಕಾಯ್ದು ಕೊಳ್ಳಲು ತಿಂಗಳಿಗೊಂದು ಬಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸುವು ದನ್ನು ಕಡ್ಡಾಯಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ