ನವದೆಹಲಿ: ಪಟೇಲ್ ಸಮುದಾಯಕ್ಕೆ ಮೀಸಲಾತಿ ಒತ್ತಾಯಿಸಿ ನಾವು ನಡೆಸುತ್ತಿರುವ ಚಳುವಳಿಯನ್ನು ಹೈಜಾಕ್ ಮಾಡಲು ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ಯತ್ನಿಸುತ್ತಿದೆ ಎಂದು ಪಾಟಿದಾರ ಅನಾಮತ್ ಅಂದೋಲನ ಸಮಿತಿ ನಾಯಕ ಹಾರ್ದಿಕ್ ಪಟೇಲ್ ದೂರಿದ್ದಾರೆ.
ಪಟೇಲ್ ಸಮುದಾಯಕ್ಕೆ ಸರ್ಕಾರಿ ನೌಕರಿ ಮತ್ತು ಶಿಕ್ಷಣದಲ್ಲಿ ಮೀಸಲು ನೀಡಲು ಆಗ್ರಹಿಸಿ ತಾವು ನಡೆಸುತ್ತಿರುವ ಚಳುವಳಿಯನ್ನು ತನ್ನ ತೆಕ್ಕೆಗೆ ಪಡೆಯಲು ಸಂಘ ಪರಿವಾರ ಯತ್ನಿಸುತ್ತಿದೆ ಎಂದು ತನಗನ್ನಿಸುತ್ತಿದೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಸದ್ಯ ದೆಹಲಿಯಲ್ಲಿರುವ 22 ವರ್ಷದ ಹಾರ್ದಿಕ್ ಪಟೇಲ್, ನಾವು ಚಳುವಳಿಯನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಮೀಸಲು ಪದ್ಧತಿ ಪರಿಶೀಲಿಸುವ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದರು ಎಂದರು.
ಜಾತಿ ಆಧಾರಿತ ಮೀಸಲು ಕಿತ್ತೊಗೆಯಲು ಆರ್‌ಎಸ್‌ಎಸ್ ಹಾತೊರೆಯುತ್ತಿರುವುದನ್ನು ಸೂಚಿಸುತ್ತದೆ. ಸದ್ಯ ಚಾಲ್ತಿಯಲ್ಲಿರುವ ಮೀಸಲು ವ್ಯವಸ್ಥೆ ರಾಜಕೀಯ ಪ್ರೇರಿತವಾಗಿದ್ದು, ಯಾರಿಗೆ ಮತ್ತು ಎಷ್ಟು ಅವಧಿಗೆ ಮೀಸಲುಬೇಕು ಎಂದು ನಿರ್ಧರಿಸಲು ರಾಜಕೀಯೇತರ ಸಮಿತಿಗಳನ್ನು ರಚಿಸಬೇಕು ಎಂದು ಇತ್ತೀಚೆಗೆ ಭಾಗವತ್ ಹೇಳಿದ್ದರು ಎಂದರು.
ಬ್ರಾಹ್ಮಣರು ಸದಾ ಮಾಡುವುದು ಇದನ್ನೇ, ಮೇಲ್ಜಾತಿಯವರು ಯಾವಾಗಲೂ ಎಲ್ಲದರಲ್ಲೂ ಒಳ್ಳೆಯ ಪಾಲನ್ನೇ ಪಡೆದುಕೊಳ್ಳುತ್ತಾರೆ. ನ್ಯಾಯಾಂಗ ಸೇರಿದಂತೆ ಎಲ್ಲ ಕ್ಷೇತ್ರಗಳ್ಲೂ ಪ್ರಾಬಲ್ಯ ಸಾಧಿಸಿದ್ದಾರೆ. ಕೆಳ ಜಾತಿಯವರು ಓಟ್ ಬ್ಯಾಂಕ್ ಕಾರಣಕ್ಕೆ ತಮ್ಮ ಪಾಲು ಪಡೆಯುತ್ತಾರೆ. ನಡುವೆ ಹೊರಗುಳಿವ ನಮ್ಮ ಕತೆ ಏನು ಎಂದು ಪಟೇಲ್ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics