ದೆಹಲಿ ನ್ಯಾಯಾಲಯ (ಸಂಗರ್ಹ ಚಿತ್ರ) 
ದೇಶ

14 ವರ್ಷದ ಹಿಂದೆ 400 ರು.ದರೋಡೆ ಮಾಡಿದ್ದವರಿಗೆ 4 ವರ್ಷ ಜೈಲು..!

14 ವರ್ಷದ ಹಿಂದೆ ಆಟೋ ಚಾಲಕನಿಂದ 400ರು. ದೋಚಿದ್ದ ಇಬ್ಬರು ವ್ಯಕ್ತಿಗಳಿಗೆ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿ, ತಲಾ 10 ಸಾವಿರ ರು. ದಂಡವಿಧಿಸುವಂತೆ ಸೂಚಿಸಿದೆ...

ನವದೆಹಲಿ: 14 ವರ್ಷದ ಹಿಂದೆ ಆಟೋ ಚಾಲಕನಿಂದ 400ರು. ದೋಚಿದ್ದ ಇಬ್ಬರು ವ್ಯಕ್ತಿಗಳಿಗೆ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿ, ತಲಾ 10 ಸಾವಿರ ರು. ದಂಡವಿಧಿಸುವಂತೆ  ಸೂಚಿಸಿದೆ.

ತೀರ ಅಪರೂಪದ ಪ್ರಕರಣಗಳಲ್ಲಿ ಒಂದಾದ ಈ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ನಿವಾಸಿಗಳಾದ ಸುಮಿತ್(33 ವರ್ಷ) ಹಾಗೂ ಹೇಮ್ ರಾಜ್(37ವರ್ಷ) ಐಪಿಸಿ ಸೆಕ್ಷನ್ 392(34)ರ ಪ್ರಕಾರ  ದೋಷಿ ಎಂದು ದಿಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಹೆಮಾನಿ ಮಲೋತ್ರಾ ತೀರ್ಪು ನೀಡಿದ್ದರು. ಇಬ್ಬರೂ ಆರೋಪಿಗಳು ತಲಾ 10 ಸಾವಿರ ರೂಪಾಯಿಯಂತೆ ಆಟೋ ಚಾಲಕ ವಿಜಯ್ ಗೆ  ಪಾವತಿಸುವಂತೆ ಸೂಚನೆ ನೀಡಿದೆ.

2001 ಸೆಪ್ಟೆಂಬರ್ 11ರ ರಾತ್ರಿ ಉತ್ತರ ದೆಹಲಿಯ ಬುರಾರಿಯತ್ತ ತೆರಳುತ್ತಿದ್ದ ಆಟೋವನ್ನು ಅಡ್ಡಗಟ್ಟಿದ್ದ ಸುಮತ್ ಮತ್ತು ಹೇಮರಾಜ್ ಆಟೋ ಚಾಲಕನಿಂದ 400 ರು. ದೋಚಿ  ಪರಾರಿಯಾಗಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 2 ದಿನಗಳ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ನ್ಯಾಯಾಲಯದಲ್ಲಿ ಇಬ್ಬರೂ ಆರೋಪಿಗಳು  ತಮ್ಮದೇನೂ ತಪ್ಪಿಲ್ಲ. ಪ್ರಕರಣದಲ್ಲಿ ತಮ್ಮನ್ನು ಸುಖಾಸುಮ್ಮನೆ ಸಿಕ್ಕಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ 10 ವರ್ಷಗಳ ಬಳಿಕ ದೌರ್ಜನ್ಯಕ್ಕೊಳಗಾದ ಆಟೋಚಾಲಕ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು  ಆರೋಪಿಗಳಿಗೆ 4 ವರ್ಷ ಜೈಲು ಮತ್ತು ತಲಾ 10 ಸಾವಿರ ರು. ದಂಡ ವಿಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!