ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಎಷ್ಟು ಮಿತಿ ಮೀರಿದೆ. ಅತಿಯಾದ ವಾಯು ಮಾಲಿನ್ಯ ದಿಂದಾಗಿ ದೇಶದ ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಅವರ ಮೊಮ್ಮಗ ಮೂಗಿಗೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ.
ವಾಯುಮಾಲಿನ್ಯ ನಿಯಂತ್ರಿಸುವ ಸಲುವಾಗಿ ದೆಹಲಿಗೆ ಪ್ರವೇಶಿಸುವ ಟ್ರಕ್‌ಗಳಿಗೆ 600ರಿಂದ 1,200 ರೂ.ವರೆಗೆ ಭಾರಿ ದಂಡ ವಿಧಿಸುವಂತೆ ಸೂಚಿಸಲು ಕೋರ್ಟ್ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ವಾಯುಮಾಲಿನ್ಯ ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಸೂಚಿಸಲು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಅಮಿಕಸ್ ಕ್ಯೂರಿ ಹರೀಶ್ ಸಾಳ್ವೆ ಅವರು, ''ದಿಲ್ಲಿಯಲ್ಲಿ ಮಾಲಿನ್ಯತೆ ಮಿತಿ ಮೀರಿದೆ. ನನ್ನ ಮಗಳು ಅಸ್ತಮಾದಿಂದ ಬಳಲುತ್ತಿದ್ದಾಳೆ. ನಾನು ಈಗ ಸ್ಟಿರಾಯ್ಡ್ ತೆಗೆದುಕೊಳ್ಳುವಂತಾಗಿದೆ,'' ಎಂದರು.
ಸಾಳ್ವೆ ಅವರ ಮಾತಿಗೆ ದನಿ ಗೂಡಿಸಿದ ಸಿಜೆಐ ದತ್ತು ಅವರು, ಪರಿಸ್ಥಿತಿ ಗಂಭೀರವಾಗಿದೆ. ನನ್ನ ಮೊಮ್ಮಗ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಾನೆ ಅಷ್ಟರ ಮಟ್ಟಿಗೆ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದೆ ಎಂದರು. ರಾಜಧಾನಿ ದೆಹಲಿ ವಾಯು ಮಾಲಿನ್ಯ ವಿಚಾರವನ್ನು ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಬೇಕು. ಮುಖಪುಟದಲ್ಲಿ ಸುದ್ದಿ ಮಾಡಬೇಕು,'' ಎಂದೂ ಸಿಜೆಐ ಅಭಿಪ್ರಾಯಪಟ್ಟರು.