ನವದೆಹಲಿ: ಬಡವರಾಗಿದ್ದವರಿಗೆ ಗೌಪ್ಯತೆ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ, ಅವರು ಗೌಪ್ಯತೆ ಕಾಪಾಡಬಾರದೇಕೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಪ್ರಶ್ನೆ ಕೇಳಿದೆ.
ಆಧಾರ್ ಸಂಖ್ಯೆ ಬಳಕೆಗೆ ಸಂಬಂಧಪಟ್ಟಂತೆ ರಿಸರ್ವ್ ಬ್ಯಾಂಕ್ ಮತ್ತು ಸೆಬಿ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ಸುಪ್ರೀಂಕೋರ್ಟ್, ಒಬ್ಬ ವ್ಯಕ್ತಿ ಬಡವನಾಗಿದ್ದ ಮಾತ್ರಕ್ಕೆ ಆತನಿಗೆ ಗೌಪ್ಯತೆಯೆಂಬುದಿಲ್ಲ ಎಂದು ಅರ್ಥವಲ್ಲ ಎಂದಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಎಲ್ ಪಿಜಿ ಗೆ ಆಧಾರ್ ಸಂಖ್ಯೆಯನ್ನು ಬಳಸುವ ಬಗ್ಗೆ ಆರ್ ಬಿಐ ಮತ್ತು ಸೆಬಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನಾಳೆ ಆದೇಶ ಹೊರಡಿಸಲಿದೆ.
ಬಡವರಿಗಾಗಿ ಇರುವ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಸಂಪರ್ಕಿಸದಂತೆ ಆಗಸ್ಟ್ 11ರಂದು ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ಆದೇಶದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆರ್ ಬಿಐ ಅರ್ಜಿ ಸಲ್ಲಿಸಿತ್ತು.