ಧಾರ್ಮಿಕ ನಾಯಕಿ ಸಾಧ್ವಿ ಪ್ರಾಚಿ (ಸಂಗ್ರಹ ಚಿತ್ರ) 
ದೇಶ

ದಾದ್ರಿ ಪ್ರಕರಣ: ನಿಷೇದಾಜ್ಞೆ ಉಲ್ಲಂಘಿಸಿದ ಸಾಧ್ವಿ ಪ್ರಾಚಿ ಬಂಧನ

ಗೋಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣ ಇದೀಗ ದಾದ್ರಿಯಾದ್ಯಂತ ಉದ್ವಿಗ್ನ ವಾತಾವರಣ ಸೃಷ್ಚಿಮಾಡಿದ ಹಿನ್ನೆಲೆಯಲ್ಲಿ ಬಿಸಡಾಗಾಂವ್ ನಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವಿವಾದಿತ...

ದಾದ್ರಿ: ಗೋಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣ ಇದೀಗ ದಾದ್ರಿಯಾದ್ಯಂತ ಉದ್ವಿಗ್ನ ವಾತಾವರಣ ಸೃಷ್ಚಿಮಾಡಿದ ಹಿನ್ನೆಲೆಯಲ್ಲಿ ಬಿಸಡಾಗಾಂವ್ ನಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವಿವಾದಿತ ಧಾರ್ಮಿಕ ನಾಯಕಿ ಸಾಧ್ವಿ ಪ್ರಾಚಿಯನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಾಡಾಗಾಂವ್ ನಲ್ಲಿ ಹೊರವ್ಯಕ್ತಿಗಳು ಭೇಟಿ ನೀಡದಂತೆ ನಿಷೇಧಾಜ್ಞೆ ಹೇರಲಾಗಿತ್ತು. ಆದರೂ, ದಾದ್ರಿಗೆ ಭೇಟಿ ನೀಡಲು ಸಾಧ್ವಿ ಪ್ರಾಚಿ ಪ್ರಯತ್ನಿಸಿದ್ದರು. ಇದಕ್ಕೆ ಉತ್ತರ ಪ್ರದೇಶದ ಪೊಲೀಸರು ನಿರಾಕರಿಸಿದ್ದರು. ಹೀಗಾಗಿ ಹಠಹಿಡಿದು ಕುಳಿತಿದ್ದ ಸಾಧ್ವಿ ಪ್ರಾಚಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ದಾದ್ರಿ ಪ್ರಕರಣ ಸಂಬಂಧ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆಗಿಳಿದಿದ್ದ ಜಯಪ್ರಕಾಶ್ ಸಾವಿನ ಸುತ್ತ ಸಾಕಷ್ಟು ಅನುಮಾನಗಳಿವೆ. ಜಯಪ್ರಕಾಶ್ ಸಾವಿನ ನಂತರ ಅಸಾದುದ್ದೀನ್ ಓವೈಸಿಗೆ ದಾದ್ರಿಗೆ ಭೇಟಿ ನೀಡಿದ್ದರು. ಅವರು ಹೈದರಾಬಾದ್ ನಿಂದ ಬಂದಿದ್ದರು. ಆದರೆ, ನನ್ನನ್ನು ಮಾತ್ರ ಪ್ರವೇಶ ಮಾಡಲು ಇಲ್ಲಿನ ಅಧಿಕಾರಿಗಳು ಬಿಡುತ್ತಿಲ್ಲ. ನನ್ನನ್ನು ಪ್ರವೇಶ ಮಾಡಲು ಬಿಡದಿರುವ ಹಿಂದೆ ಆಡಳಿತ ಮಂಡಳಿಯವರ ವ್ಯವಸ್ಥಿತ ಪಿತೂರಿಯಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಉತ್ತರ ಪ್ರದೇಶ ಸಚಿವ ಅಜಂ ಖಾನ್ ವಿರುದ್ಧ ಕಿಡಿಕಾರಿರುವ ಅವರು, ಅಜಂಖಾನ್ ಒಬ್ಬ ದೇಶದ್ರೋಹಿ. ಪ್ರಕರಣ ಸಂಬಂಧ ನ್ಯಾಯ ಬೇಕಿದ್ದರೆ ಕಾನೂನು ಇದೆ. ನ್ಯಾಯಾಲಯ ಇದೆ. ನ್ಯಾಯಾಲಯದ ಮೊರೆ ಹೋಗುವ ಬದಲು ಇದೀಗ ವಿಶ್ವಸಂಸ್ಥೆಯ ಮೊರೆ ಹೋಗುವುದಾಗಿ ಅಜಂಖಾನ್ ಹೇಳುತ್ತಿರುವುದು ಸರಿಯಲ್ಲ. ದಾದ್ರಿ ಪ್ರಕರಣ ಸಂಬಂಧ ವಿಶ್ವಸಂಸ್ಥೆಯ ಮೊರೆ ಹೋಗಿರುವುದು ಭಾರತ ದೇಶಗ ಗೌರವಕ್ಕೆ ಧಕ್ಕೆಯುಂಟು ಮಾಡುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ನಿನ್ನೆ ಗಾಯಗೊಂಡಿದ್ದ ಹಾಗೂ ಸಾವನ್ನಪ್ಪಿದ ಜಯಪ್ರಕಾಶ್ ಹಾಗೂ ರಾಹುಲ್ ಯಾದವ್ ಅವರ ಕುಟುಂಬಸ್ಥರಿಗೆ ಸರ್ಕಾರ ಕೂಡಲೇ ತಲಾ ರು.50 ಲಕ್ಷ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: Falahari Maharaj ಯೂ-ಟರ್ನ್, ಕ್ಷಮೆಯಾಚನೆ! video