ಇಂದಿರಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ 
ದೇಶ

ಪ್ರಿಯಾಂಕ ತಮ್ಮ ರಾಜಕೀಯ ಪರಂಪರೆ ಮುಂದುವರೆಸಬೇಕೆಂಬುದು ಇಂದಿರಾ ಆಸೆಯಾಗಿತ್ತು

ರಿಯಾಂಕಾ ಗಾಂಧಿ ತಮ್ಮ ರಾಜಕೀಯ ಜೀವನದ ಉತ್ತರಾಧಿಕಾರಿಯಾಗಬೇಕೆಂಬುದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ..

ನವದೆಹಲಿ: ಮೊಮ್ಮಗಳು ಪ್ರಿಯಾಂಕಾ ಗಾಂಧಿ ತಮ್ಮ ರಾಜಕೀಯ ಜೀವನದ ಉತ್ತರಾಧಿಕಾರಿಯಾಗಬೇಕೆಂಬುದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಆಸೆಯಾಗಿತ್ತು ಎಂದು ಇಂದಿರಾ ಗಾಂಧಿ ಅವರ ಆಪ್ತ ಹಿರಿಯ ಕಾಂಗ್ರೆಸ್ ನಾಯಕ ಎಂ.ಎಲ್ ಪೊಟೆದಾರ್ ಹೇಳಿದ್ದಾರೆ.

ತಮ್ಮ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಭವಿಷ್ಯದಲ್ಲಿ ಉತ್ತಮ ರಾಜಕೀಯ ನಾಯಕಿಯಾಗುತ್ತಾಳೆ, ಅವಳಲ್ಲಿ ಉತ್ತಮ ರಾಜಕೀಯ ನಾಯಕಿಯಾಗುವ ಎಲ್ಲಾ ಲಕ್ಷಣಗಳಿವೆ. ಪ್ರಿಯಾಂಕಾಳಲ್ಲಿ ತಮ್ಮ ರಾಜಕೀಯ ಜೀವನದ ಪ್ರತಿಬಿಂಬ ಕಾಣುತ್ತಿದೆ ಎಂದು ಇಂದಿರಾ ಗಾಂಧಿ ರಾಜಕೀಯ ಸಲಹೆಗಾರರಾಗಿದ್ದ ಪೊಟೇದಾರ್ ಅವರ ಬಳಿ ಹೇಳಿದ್ದರು.

ಇಂದಿರಾ ಗಾಂಧಿ ಹತ್ಯೆಗೂ ಕೆಲ ದಿನಗಳ ಮುನ್ನ ನಾವೆಲ್ಲಾ ಕಾಶ್ಮೀರದ ದೇವಾಲಯಕ್ಕೆ ತೆರಳಿದ್ದವು. ದೇವರ ದರ್ಶನದ ನಂತರ ಒಂದು ಮರದ ಕೆಳಗೆ ಕುಳಿತು ವಿಶ್ರಮಿಸುತ್ತಿದ್ದ ವೇಳೆ ಮಾತನಾಡಿದ ಇಂದಿರಾಗಾಂಧಿ ಅವರಿಗೆ ತಮ್ಮ ಸಾವಿನ ಸೂಚನೆೆ ದೊರೆತಿತ್ತೇನೋ. ಹಾಗಾಗಿಯೇ ಅವರು ತಮ್ಮ ರಾಜಕೀಯ ಜೀವನದ ಮುಂದಿನ ಉತ್ತರಾಧಿಕಾರಿ ಪ್ರಿಯಾಂಕಾ ಆಗಬೇಕು ಎಂಬ ಮಹಾದಾಸೆ ಹೊಂದಿದ್ದರು ಎಂದು ಪೊಟೇದಾರ್ ಹೇಳಿದ್ದಾರೆ.

ಇಂದಿರಾ ಸಾವಿನ ನಂತರ ಅವರ ಅಪೇಕ್ಷೆ ಏನೆಂಬುದನ್ನು ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೆ. ಆದರೆ ಇಬ್ಬರು ಈ ವಿಷಯವನ್ನು ಗಂಂಭೀರವಾಗಿ ಪರಿಗಣಿಸಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿರುವ ಪೊಟೇದಾರ್, ಇಂದಿರಾ ಗಾಂಧಿಯ ಪ್ರತಿಬಿಂಬ ಪ್ರಿಯಾಂಕಾ ಗಾಂಧಿಯಲ್ಲಿ ಕಾಣುತ್ತಿದೆ ಎಂದು ಹೇಳಿದ್ದಾರೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ