ಸಾಂದರ್ಭಿಕ ಚಿತ್ರ 
ದೇಶ

ಅತ್ಯಾಚಾರ ಹತ್ತಿಕ್ಕುವಲ್ಲಿ ಭಾರತ ಸರ್ಕಾರ ವಿಫಲ:ಲ್ಯಾನ್ಸೆಟ್ ಪತ್ರಿಕೆ ಕಿಡಿ

ಭಾರತಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಕೃತ್ಯಗಳು ಹಾಗೂ ಮಹಿಳೆಯರ ಮೇಲಿನ ಹಿಂಸೆಯನ್ನು ತಡೆಯಲು ಕೇಂದ್ರ ಸರ್ಕಾರವಿಫಲವಾಗಿದೆ ಎಂದು ಬ್ರಿಟನ್‍ನ...

ನವದೆಹಲಿ: ಭಾರತಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಕೃತ್ಯಗಳು ಹಾಗೂ ಮಹಿಳೆಯರ ಮೇಲಿನ ಹಿಂಸೆಯನ್ನು ತಡೆಯಲು ಕೇಂದ್ರ ಸರ್ಕಾರವಿಫಲವಾಗಿದೆ ಎಂದು ಬ್ರಿಟನ್‍ನ ಗೌರವಾನ್ವಿತ ವೈದ್ಯಕೀಯ ಪತ್ರಿಕೆಯೊಂದು ದೂರಿದೆ. ಇದು ಕೇಂದ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದುರಾಗಿರುವ ಇನ್ನೊಂದು ಮುಖಭಂಗ. ವೈದ್ಯಕೀಯ ಪತ್ರಿಕೆ `ಲ್ಯಾನ್ಸೆಟ್'ನ ಮುಖ್ಯ ಸಂಪಾದಕ ರಿಚರ್ಡ್ ಹೋರ್ಟನ್, ಸುರಕ್ಷತೆಯ ವಿಚಾರದಿಂದ ಆರೋಗ್ಯದ ವಿಚಾರದವರೆಗೆ ಮಹಿಳೆಯರನ್ನು ರಕ್ಷಿಸುವುದು ಸರ್ಕಾರದ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದ್ದು, ಮಹಿಳೆಯರ ಮತ್ತು ಯುವತಿಯ ಆರೋಗ್ಯವು ಅವರ ಮೇಲೆ ನಡೆಯುವ ಹಿಂಸೆಯನ್ನು   ನೇರವಾಗಿ ಆಧರಿಸಿದೆ ಎಂದಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಈ ಹಿಂಸಾಚಾರದ ಕುರಿತು ವಿಶೇಷ ಆವೃತ್ತಿಯೊಂದನ್ನು ಹೊರ ತರುವುದಾಗಿ ನುಡಿದಿದ್ದಾರೆ. ಅತ್ಯಾಚಾರ ಹಿಂಸೆಗಳು ವಾಸ್ತವವಾಗಿ ದೊಡ್ಡ ಮೊತ್ತದಲ್ಲಿವೆ. ಆದರೆ ಅದರ ಕುರಿತು ಮಾತನಾಡುವುದು ನಿಷಿದ್ಧ. ಮಹಿಳೆ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿ ಈ ವಿಚಾರ ಮುಖ್ಯ. ಭಾರತದಲ್ಲಿ ನಡೆಯುತ್ತಿರುವ ಇತ್ತೀಚಿನ ಘಟನೆಗಳು ಸರ್ಕಾರಕ್ಕೆ ಎಚ್ಚರಿಕೆಯ ಪಾಠ. ಅದು ಮಹಿಳೆಯರ ಸುರಕ್ಷೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದಿದ್ದಾರೆ ಹೋರ್ಟನ್. ಕಳೆದ ವರ್ಷ ಮಹಿಳೆಯರ ಮೇಲಿನ ಹಿಂಸೆ ಬಗ್ಗೆ ವಿಶೇಷ ಸಂಚಿಕೆಯನ್ನು ಲ್ಯಾನ್ಸೆಟ್ ತಂದಿತ್ತು. ಅದರಲ್ಲಿ ಭಾರತವನ್ನು ಪ್ರಸ್ತಾವಿಸಿದ್ದು, ಈಗ ಮತ್ತೆ ಅದನ್ನು ಫಾಲೋಅಪ್  ಮಾಡುವ ಅಗತ್ಯವನ್ನು ಒತ್ತಿಹೇಳಿದ್ದಾರೆ.ಮಹಿಳೆಯರ ಮೇಲಿನ ಹಿಂಸೆ ತಡೆಯುವಲ್ಲಿ ಸಾಧನೆ ಮಾಡಿರುವ ಭಾರತದ ಕಾರ್ಯಕ್ರಮವೊಂದನ್ನು ಈ ಸಂಚಿಕೆ ಉಲ್ಲೇಖಿಸಿತ್ತು. ಮುಂಬೈ ಮತ್ತು ಗೋರಖ್‍ಪುರದಲ್ಲಿ ಗುಂಪು ತರಬೇತಿ, ಸಾಮಾಜಿಕಸಂವಹನ ಕಾರ್ಯಕ್ರಮಗಳ ಮೂಲಕ ಪುರುಷರ ಆಕ್ರಮಣಕಾರಿ ಪ್ರವೃತ್ತಿಯನ್ನು ಹತ್ತಿಕ್ಕುವಲ್ಲಿ ಮಹತ್ವದ ಯಶಸ್ಸು ಕಂಡ `ಯಾರೀದೋಸ್ತಿ' ಎಂಬ ಕಾರ್ಯಕ್ರಮವನ್ನು ಸಂಚಿಕೆ ಶ್ಲಾಘಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್