(ಸಂಗ್ರಹ ಚಿತ್ರ) 
ದೇಶ

ದಾದ್ರಿ ದಾಳಿಗೆ ಅಖ್ಲಾಕ್ ಮಗನಿಗಿದ್ದ ಹಿಂದೂ ಹುಡುಗಿಯೊಂದಿಗಿನ ಪ್ರೇಮವೇ ಕಾರಣ: ಎಬಿವಿಪಿ

ಗೋಮಾಂಸ ಸೇವನೆ ಶಂಕೆಯಿಂದಾಗಿ ಉತ್ತರ ಪ್ರದೇಶದ ದಾದ್ರಿಯ ಬಿಸಡಾಗಾಂವ್ ನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ್ದು ಹಾಗೂ ಮನೆಗೆ ನುಗ್ಗಿ ದಾಳಿ ಮಾಡಿದ ಪ್ರಕರಣಕ್ಕೆ ಪ್ರಮುಖ ಕಾರಣ ಹತ್ಯೆಯಾದ ವ್ಯಕ್ತಿ ಅಖ್ಲಾಕ್ ಮಗನಿಗಿದ್ದ ಪ್ರೇಮ ವ್ಯವಹಾರವೇ ಕಾರಣ ಎಂದು ಅಖಿಲ...

ಲಖನೌ: ಗೋಮಾಂಸ ಸೇವನೆ ಶಂಕೆಯಿಂದಾಗಿ ಉತ್ತರ ಪ್ರದೇಶದ ದಾದ್ರಿಯ ಬಿಸಡಾಗಾಂವ್ ನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ್ದು ಹಾಗೂ ಮನೆಗೆ ನುಗ್ಗಿ ದಾಳಿ ಮಾಡಿದ ಪ್ರಕರಣಕ್ಕೆ ಪ್ರಮುಖ ಕಾರಣ ಹತ್ಯೆಯಾದ ವ್ಯಕ್ತಿ ಅಖ್ಲಾಕ್ ಮಗನಿಗಿದ್ದ ಪ್ರೇಮ ವ್ಯವಹಾರವೇ ಕಾರಣ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೋಮವಾರ ಹೇಳಿಕೊಂಡಿದೆ.

ಈ ಕುರಿತಂತೆ ಖಾಸಗಿ ಪತ್ರಿಕೆಯೊಂದರಲ್ಲಿ ಮಾತನಾಡಿರುವ ಎಬಿವಿಪಿಯ ಅವಧ್ ವಲಯದ ಸಂಘಟನಾ ಕಾರ್ಯದರ್ಶಿ ಸತ್ಯ ಭಾನ್ ಅವರು, ದಾದ್ರಿಯ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣವು ಗೋಮಾಂಸ ಸೇವನೆ ವದಂತಿಗೆ ಸಂಬಂಧಿಸಿದ್ದಲ್ಲ. ದಾದ್ರಿ ಪ್ರಕರಣಕ್ಕೆ ಅಖ್ಲಾಕ್ ನ ಇಬ್ಬರು ಮಕ್ಕಳಲ್ಲಿ ಒಬ್ಬನಿಗೆ ಹಿಂದೂ ಯುವತಿಯೊಂದಿಗಿದ್ದ ಪ್ರೇಮ ವ್ಯವಹಾರವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.

ಇದಲ್ಲದೆ ಖಾಸಗಿ ಪತ್ರಿಕೆಯ ವರದಿಯಲ್ಲಿ ಅಖ್ಲಾಕ್ ಮಕ್ಕಳಲ್ಲಿ ಒಬ್ಬನಿಗೆ ಸ್ಧಳೀಯ ಹಿಂದೂ ಯುವತಿಯೊಂದಿಗೆ ಪ್ರೇಮವಿರುವ ಕುರಿತಂತೆ ಉತ್ತರ ಪ್ರದೇಶದ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿ ಅವರ ಕುಟುಂಬದ ಮೇಲೆಯೂ ದಾಳಿ ನಡೆದಿದೆ ಎಂದು ಸತ್ಯಭಾನ್ ಹೇಳಿರುವುದಾಗಿ ಹೇಳಿಕೊಂಡಿದೆ.

ದಾದ್ರಿ ಪ್ರಕರಣವನ್ನು ವಿವಿಧ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ, ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದಾಗಿ ಪ್ರಕರಣವನ್ನು ಗೋಮಾಂಸ ಸೇವನೆ ಶಂಕೆಗೆ ಬದಲಾಯಿಸಿದ್ದಾರೆ. ಪ್ರಕರಣ ಸಂಬಂಧ ನ್ಯಾಯಕ್ಕಾಗಿ ಅಜಂಖಾನ್ ಅವರು ವಿಶ್ವಸಂಸ್ಥೆಗೆ ಪತ್ರ ಬರೆಯುತ್ತೇನೆಂದು ಹೇಳಿರುವುದು ಭಾರತದ ಘನತೆಗೆ ಧಕ್ಕೆಯುಂಟು ಮಾಡುತ್ತದೆ. ಈ ವಿಷಯವನ್ನು ಸಮಾವೇಶದಲ್ಲಿ ಸ್ಪಷ್ಟಪಡಿಸಲಾಗುತ್ತದೆ.

ದಾದ್ರಿ ಪ್ರಕರಣವು ಇದೀಗ ಓಲೈಕೆ ರಾಜಕಾರಣದ ಒಂದು ಭಾಗವಾಗಿಬಿಟ್ಟಿದೆ. ಸಂತ್ರಸ್ತರು ಒಂದು ನಿರ್ಧಿಷ್ಟ ಸಮುದಾಯಕ್ಕೆ ಸೇರಿದವರಾದುದರಿಂದ ಉತ್ತರ ಪ್ರದೇಶ ಸರ್ಕಾರ ಅವರಿಗೆ ಬೃಹತ್ ಮೊತ್ತದ ಪರಿಹಾರವನ್ನು ಘೋಷಿಸಿದೆ.

ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ರಾಜ್ಯ ಮಟ್ಟದ ಸಮಾವೇಶವೊಂದಕ್ಕೆ ಸೀತಾಪುರ್ ನಲ್ಲಿ ಸಿದ್ಧತೆ ನಡೆಯುತ್ತಿದೆ. ನವೆಂಬರ್ 1 ರಿಂದ 3ರವರೆಗೆ ಈ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಎಬಿವಿಪಿಯು ದಾದ್ರಿ ಪ್ರಕರಣಕ್ಕೆ ಪ್ರಮುಖ ಕಾರಣ, ಕೋಮು ಸೌಹಾರ್ದತೆ, ಮಹಿಳಾ ರಕ್ಷಣೆ, ಶಿಕ್ಷಣದ ವಾಣಿಜ್ಯೀಕರಣ, ವಿದ್ಯಾರ್ಥಿ ಸಂಘ ಚುನಾವಣೆ, ಭಯೋತ್ಪಾದನೆ ಮತ್ತು ನಿರುದ್ಯೋಗದಂತಹ ವಿವಿಧ ವಿಷಯಗಳನ್ನು ಸಮಾವೇಶದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT