ಮುಂಬಯಿ: ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಚೋಟಾ ರಾಜನ್ ಬಳಿ ಬರೋಬ್ಬರಿ 4 ರಿಂದ 5 ಸಾವಿರ ಕೋಟಿ ರೂಪಾಯಿ ಹಣವಿದೆ.
ಛೋಟಾ ರಾಜನ್ ಸಂಪತ್ತಿನಲ್ಲಿ ಶೇ.50ರಷ್ಟು ಬಂಡವಾಳ ಭಾರತದಲ್ಲೇ ಹೂಡಿಕೆಯಾಗಿದ್ದು, ಅದರಲ್ಲೂ ಮುಂಬೈ ಹಾಗೂ ಈ ವ್ಯಾಪ್ತಿಗೆ ಸೇರಿದ ಸ್ಯಾಟ್‌ಲ್ಲೈಟ್ ನಗರಗಳಲ್ಲೇ ಇದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಚೀನಾದಲ್ಲಿ ಚೋಟಾ ರಾಜನ್‌ನಿಗೆ ಸೇರಿದ ಹೊಟೇಲ್ ಒಂದಿದೆ. ಥೈಲ್ಯಾಂಡ್, ಸಿಂಗಾಪೂರ್‌ಗಳಲ್ಲಿ ಕೆಲವು ಚಿನ್ನಾಭರಣ ಅಂಗಡಿಗಳಿವೆ. ಇಂಡೋನೇಷ್ಯಾದ ಜಕಾರ್ತಾದಲ್ಲಿಯೂ ಒಂದು ಹೊಟೇಲ್ ಇದೆ. ಜಿಂಬಾಬ್ವೆ ಸೇರಿದಂತೆ ಆಫ್ರಿಕಾದ ದೇಶಗಳಲ್ಲಿ ವಜ್ರದ ವ್ಯಾಪಾರವನ್ನು ಛೋಟಾ ರಾಜನ್ ನಡೆಸುತ್ತಿದ್ದಾನೆ.
ಈ ಮೊದಲು ಜಿಂಬಾಬ್ವೆಯಲ್ಲಿ ಆಶ್ರಯ ಪಡೆಯುವ ನಿಟ್ಟಿನಲ್ಲಿ ಅಲ್ಲಿನ ಅಧಿಕಾರಿಗಳೊಂದಿಗೆ ರಾಜನ್ ಡೀಲ್ ನಡೆಸಿದ್ದ. ಆದರೆ ಭಾರತದಲ್ಲಿ ವಾಂಟೆಡ್ ಆಗಿರುವ ಯಾರಿಗೂ ತಾನು ಈ ಆಶ್ರಯ ಕೊಡದಿರಲು ಜಿಂಬಾಬ್ವೆ ನಿರ್ಧರಿಸಿದೆ. ಇನ್ನು ಛೋಟಾ ರಾಜನ್ ಗೆ ಝೆಡ್ ಪ್ಲಸ್ ಭದ್ರತೆ ನಡಲು ಸಾಧ್ಯವಿಲ್ಲ ಎಂದು ಹೇಳಿರುವ ಮುಂಬಯಿ ಪೋಲೀಸ್ ಅಧಿಕಾರಿಗಳು ಆತನಿಗೆ ಅಗತ್ಯವಿರುವ ಆಸ್ಪತ್ರೆ ಸವಲತ್ತುಗಳನ್ನು ಒದಗಿಸುವುದಾಗಿ ತಿಳಿಸಿದೆ.